ಮದರಸಾದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ
Posted On November 19, 2017
0
ಮುಂಬೈ: ಬರೀ ಧಾರ್ಮಿಕ ಶಿಕ್ಷಣಕ್ಕೆ ಹೆಸರಾಗಿದ್ದ ಮದರಸಾಗಳು ಈಗ ಅತ್ಯಾಚಾರ ವಿಷಯದಲ್ಲೂ ಸುದ್ದಿಯಾಗುತ್ತಿದ್ದು, ಮುಂಬೈನ ಮುಂಬ್ರಾ ಎಂಬಲ್ಲಿನ ಮದರಸಾವೊಂದರಲ್ಲಿ ಶಿಕ್ಷಕನೇ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಿಹಾರದಿಂದ ಅರೇಬಿಕ್ ಕಲಿಸಲು 15 ದಿನಗಳ ಹಿಂದೆ ಮದರಸಾಕ್ಕೆ ಶಿಕ್ಷಕನಾಗಿ ಆಗಮಿಸಿದ್ದ 35 ವರ್ಷದ ವ್ಯಕ್ತಿ, ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈಗ ಬಂಧಿಸಲಾಗಿದೆ ಎಂದು ಮುಂಬ್ರಾ ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಶಿಕ್ಷಕ ಅತ್ಯಾಚಾರ ಮಾಡಿರುವ ಕುರಿತು ಮೊದಲು ತಾಯಿಗೆ ತಿಳಿಸಿದ್ದು, ಬಳಿಕ ತಾಯಿ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯನ್ವಯ ದೂರು ದಾಖಲಿಸಿದ್ದಾರೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









