ಭ್ರಷ್ಟಾಚಾರ ನಿಗ್ರಹಕ್ಕೆ ನೋಟು ನಿಷೇಧ ಸಹಕಾರಿ: ನೋಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಹೇಳಿಕೆ

ನೋಟು ನಿಷೇಧದಿಂದ ದೇಶದ ಜನ ಬೀದಿಯಲ್ಲಿ ನಿಂತರು, ಆರ್ಥಿಕ ಸ್ಥಿತಿ ಹದಗೆಟ್ಟಿತು ಎಂದು ದೇಶದಲ್ಲಿ ಬೊಬ್ಬೆ ಹಾಕುತ್ತಿದ್ದರೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದ ಕುರಿತು ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ನೋಟು ನಿಷೇಧದ ಕುರಿತು ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ರಿಚರ್ಡ್ ಥಾಲೆರ್ ಮಾತನಾಡಿದ್ದು, ನೋಟು ನಿಷೇಧ ನಿರ್ಧಾರದಿಂದ ಭ್ರಷ್ಟಾಚಾರ ತಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಚಿಕಾಗೋ ವಿವಿಯಲ್ಲಿ ಪ್ರೊಫೆಸರ್ ಆಗಿರುವ ಸ್ವರಾಜ್ ಕುಮಾರ್ ಅವರು ರಿಚರ್ಡ್ ಅವರಿಗೆ ನೋಬೆಲ್ ಪ್ರಶಸ್ತಿ ಬಂದ ಕಾರಣ ವಿಶ್ ಮಾಡಿದ್ದು, ಅದಕ್ಕೆ ಧನ್ಯವಾದ ತಿಳಿಸಿರುವ ರಿಚರ್ಡ್, ನೋಟ್ ಬ್ಯಾನ್ ಕುರಿತು ಮಾತನಾಡುತ್ತ, ಭಾರತದಲ್ಲಿ ನೋಟು ನಿಷೇಧಿಸಿರುವ ನಿರ್ಧಾರ ಸರಿಯಾಗಿದೆ. ನೂತನ 2000 ರೂಪಾಯಿ ಮೌಲ್ಯದ ನೋಟು ಮುದ್ರಣದಿಂದ ದೇಶದಲ್ಲಿ ಭ್ರಷ್ಟಾಚಾರ ತಡೆಯಬಹುದು ಎಂದು ತಿಳಿಸಿದ್ದಾರೆ.
ಅಲ್ಲದೆ ಇದು ನಗದು ರಹಿತ ವಹಿವಾಟಿಗೂ ಉತ್ತೇಜನ ನೀಡಲಿದ್ದು, ಕ್ಯಾಶ್ ಲೆಸ್ ಇಂಡಿಯಾ ನಿರ್ಮಾಣಕ್ಕೆ ಮುನ್ನುಡಿ ಎಂದಿದ್ದಾರೆ. ಆದರೆ ನೋಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಿಗೆ ತಿಳಿಯುವ ಈ ಸಂಗತಿ ಭಾರತದಲ್ಲಿರುವ ಮತಿಗೇಡಿಗಳಿಗೆ ಅರ್ಥವಾಗುವುದಿಲ್ಲವಲ್ಲ ಎಂಬುದೇ ಬೇಸರ.
Leave A Reply