ಪ್ರತಿಭಟನೆಗೆ ಬೆದರಿ ಪದ್ಮಾವತಿ ಬಿಡುಗಡೆ ಮುಂದೂಡಿಕೆ
ಮುಂಬೈ: ಇತಿಹಾಸವನ್ನು ತಿರುಚಿ ಮಹಾರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪವಿರುವ ಪದ್ಮಾವತಿ ಚಿತ್ರದ ಬಿಡುಗಡೆಯನ್ನು ಪ್ರತಿಭಟನೆಗೆ ಬೆದರಿ ಮುಂದೂಡಲಾಗಿದೆ. ನಿಗದಿಯಂತೆ ಡಿಸೆಂಬರ್ 1ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ಬಿಡುಗಡೆಗೆ ರಾಷ್ಟ್ರಾಧ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಇತ್ತೀಚೆಗೆ ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಸೇರಿ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಚಿತ್ರವನ್ನು ಸೆನ್ಸಾರ್ ಮಂಡಳಿ ಸರ್ಟಿಫಿಕೆಟ್ ನೀಡುವ ಮುನ್ನವೇ ಪ್ರದರ್ಶನ ಮಾಡಿದ್ದು, ಮಂಡಳಿ ಕೆಂಗಣ್ಣಿಗೆ ಗುರಿಯಾಗಿದೆ. ಸೂಕ್ತ ದಾಖಲೆ ನೀಡಿಲ್ಲ, ಪೂರ್ಣ ಮಾಹಿತಿ ನೀಡಿ ಎಂದು ವಿವರಣೆ ಕೇಳಿತ್ತು. ಹೀಗೆ ಸಾಲು ಸಾಲು ತೊಡಕುಗಳು ಎದುರಾಗಿದ್ದರಿಂದ ಪದ್ಮಾವತಿ ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ವಿರುದ್ಧವಾದ ಚಿತ್ರವನ್ನು ರಚಿಸಲು ನಿರ್ದೇಶಕ ಬನ್ಸಾಲಿಗೆ ಸೌದಿ ಅರೇಬಿಯಾದಿಂದ ಹಣ ಬರುತ್ತಿದೆ ಎಂದು ಇತ್ತೀಚೆಗೆ ಬಿಜೆಪಿ ರಾಜ್ಯ ಸಭೆ ಸದಸ್ಯ ಸುಬ್ರಮಣ್ಯ ಸ್ವಾಮಿ ಆರೋಪಿಸಿದ್ದರು. ಇದೇ ರೀತಿ ಹಲವು ವಿರೋಧಗಳು, ಅಪವಾದಗಳು ಪದ್ಮಾವತಿ ಚಿತ್ರಕ್ಕೆ ಎದುರಾಗಿವೆ.
Leave A Reply