ಲವ್ ಜಿಹಾದ್ ಬಗ್ಗೆ ಅರಿಯಲು ಜೈಪುರ ಉತ್ಸವಕ್ಕೆ ತೆರಳುವಂತೆ ಶಾಲೆಗಳಿಗೆ ಜೈಪುರ ಸರಕಾರ ನಿರ್ದೇಶನ
ಜೈಪುರ: ಲವ ಜಿಹಾದ್ ನಿಂದ ಹಿಂದೂ ಯುವತಿಯರು ಮೋಸ ಹೋಗುತ್ತಿರುವುದನ್ನು ತಡೆಯಲು ರಾಜಸ್ಥಾನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಜೈಪುರದಲ್ಲಿ ನಡೆಯಲಿರುವ ಜೈಪುರ ಉತ್ಸವದಲ್ಲಿ ನಡೆಯುವ ಲವ್ ಜಿಹಾದ್ ಕುರಿತ ಮಾಹಿತಿ ಪಡೆಯಲು ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು ಎಂದು ನಿರ್ದೇಶನ ನೀಡಿದೆ.
ಹಿಂದೂ ಧಾರ್ಮಿಕ ಮತ್ತು ಸೇವಾ ಉತ್ಸವವನ್ನು ಹಮ್ಮಿಕೊಂಡಿರುವ ಸಂಘಟಕರಿಗೆ ‘ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಶಿಕ್ಷಣ ಇಲಾಖೆ ಮನವಿ ಮಾಡಿಕೊಂಡಿದೆ. ಈ ಉತ್ಸವದಲ್ಲಿ ಕ್ರಿಶ್ಚಿಯನರ ಮತಾಂತರ, ಸಸ್ಯಹಾರಿ ಆಹಾರ ಪದ್ಧತಿ, ಗೋಮಾತೆಯ ಮಹತ್ವ ಸೇರಿ ನಾನಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಶಿಕ್ಷಣ ಸಚಿವ ವಾಸುದೇವ ದೇವನಾನಿ ತಿಳಿಸಿದ್ದು, ಎಲ್ಲ ಶಾಲೆಗಳ ವಿದ್ಯಾರ್ಥಿಗಳನ್ನು ಈ ಉತ್ಸವಕ್ಕೆ ಕರೆದುಕೊಂಡು ಬರಬೇಕು ಎಂದು ಆದೇಶವನ್ನು ಹೊರಡಿಸಿದ್ದಾರೆ.
ಉತ್ಸವದ ಸಂಘಟಕರು ಶಿಕ್ಷಣ ಇಲಾಖೆಗೆ 2.500 ಶಿಕ್ಷಕರನ್ನು ಕಳುಹಿಸಿಕೊಡಬೇಕು. ಅವರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದು, ಪ್ರತಿ ಶಾಲೆಯಿಂದ ಎರಡರಿಂದ ಮೂರು ಶಿಕ್ಷಕರನ್ನು ಉತ್ಸವಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
Leave A Reply