ಪದ್ಮಾವತಿ ಏನಿದು ನಿನ್ನ ಗತಿ, ಪಂಜಾಬ್, ಮಧ್ಯಪ್ರದೇಶದಲ್ಲಿ ಚಿತ್ರ ನಿಷೇಧ!
ಭೋಪಾಲ್: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಾತ್ಮಕ ಪದ್ಮಾವತಿ ಚಿತ್ರಕ್ಕೆ ದಿನಕ್ಕೊಂದು ವಿಘ್ನ ಎದುರಾಗುತ್ತಿದ್ದು, ಮಧ್ಯಪ್ರದೇಶ ಸರ್ಕಾರ ಚಿತ್ರ ನಿಷೇಧಿಸಿದೆ.
ಪದ್ಮಾವತಿ ಚಿತ್ರ ನಿಷೇಧಿಸಬೇಕು ಎಂದು ರಜಪೂತ ಸಮುದಾಯವರು ಮನವಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಪದ್ಮಾವತಿ ಚಿತ್ರ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಅಷ್ಟೇ ಅಲ್ಲ, ಪಂಜಾಬಿನಲ್ಲೂ ಸಹ ಪದ್ಮಾವತಿ ಚಿತ್ರವನ್ನು ನಿಷೇಧಿಸಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿಳಿಸಿದ್ದು, ಇತಿಹಾಸ ತಿರುಚಿರುವ ಹಾಗೂ ಸಮುದಾಯದ ಜನರಿಗೆ ಧಕ್ಕೆ ತರುವ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಮಧ್ಯಪ್ರದೇಶ ಸರ್ಕಾರ ಪದ್ಮಾವತಿ ಬಿಡುಗಡೆ ನಿಷೇಧಿಸಿದಾಗ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದಿದ್ದರು. ಆದರೆ ಪಂಜಾಬಿನಲ್ಲಿರುವ ಕಾಂಗ್ರೆಸ್ ಸರ್ಕಾರವೇ ಚಿತ್ರ ನಿಷೇಧಿಸಿದ್ದು, ಯಾವ ಸಿಎಂ ಸಹ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹೇಳುತ್ತಿಲ್ಲ.
Leave A Reply