ಆ ಐನೂರು ಮುಸ್ಲಿಮರು ಬಿಜೆಪಿ ಸೇರುವ ಹಿಂದೆ ಯಾರ ಪ್ರೇರಣೆ ಇದೆ ಗೊತ್ತಾ?
ಗಾಂಧಿನಗರ: ಬಿಜೆಪಿ ಅಂದ ತಕ್ಷಣ ಎಲ್ಲರೂ ಕೋಮುವಾದಿ ಪಕ್ಷ, ನರೇಂದ್ರ ಮೋದಿ ಎನ್ನುತ್ತಲೇ ಇಸ್ಲಾಂ ವಿರೋಧಿ ಎಂದು ಘೀಳಿಡುವ ಸಣ್ಣ ಮನಸ್ಸುಗಳಿವೆ. ಆದರೆ ಗುಜರಾತಿನಲ್ಲಿ ಬರೋಬ್ಬರಿ 500 ಮುಸ್ಲಿಮರು ಬಿಜೆಪಿ ಸೇರಿದ್ದಾರೆ.
ಆದರೆ ಇದಕ್ಕೆಲ್ಲ ಪ್ರೇರಣೆ ಯಾರು ಗೊತ್ತಾ? ಒನ್ ಆ್ಯಂಡ್ ಓನ್ಲಿ ನರೇಂದ್ರ ಮೋದಿ.
ಹೌದು, ಜಮಾಲ್ಪುರ್ ಶಾಸಕ ಭೂಷಣ್ ಭಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 500 ಮುಸ್ಲಿಮರು ಬಿಜೆಪಿ ಸೇರಿದ್ದಾರೆ.
ಬಿಜೆಪಿ ಸೇರಲು ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳೇ ಇವರಿಗೆ ಸ್ಫೂರ್ತಿಯಾಗಿದ್ದು, ಇಮ್ರಾನ್ ಖುರೇಷಿ ಹಾಗೂ ಅಮೀರ್ ಖುರೇಷಿ ಎಂಬ ಇಬ್ಬರು ಮುಸ್ಲಿಂ ಮಹಿಳೆಯರು ಸಹ ಬಿಜೆಪಿ ಸೇರಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಈ ಅಭಿವೃದ್ಧಿಯಲ್ಲಿ ನಮಗೂ ಒಂದು ಪಾಲಿರಲಿ, ನಮ್ಮ ಕ್ಷೇತ್ರಗಳೂ ಅಭಿವೃದ್ಧಿ ಹೊಂದಲಿ ಎಂಬ ಮಹದಾಸೆಯೊಂದಿಗೆ ಬಿಜೆಪಿ ಸೇರುತ್ತಿದ್ದೇವೆ ಎಂದು ಬೆಹ್ರಾಂಪುರ ನಿವಾಸಿ ಸಕೀನಾ ಮೊಹಮ್ಮದ್ ಪಠಾಣ್ ಎಂಬಾತ ತಿಳಿಸಿದ್ದಾರೆ.
ಮತ್ತೊಬ್ಬ ಮುಸ್ಲಿಂ ವ್ಯಕ್ತಿ ನಾಸಿರ್ ಖಾನ್ ಮಾತನಾಡಿದ್ದು, ಬಿಜೆಪಿ ಅಧಿಕಾರವಧಿಯಲ್ಲಿ ಮುಸ್ಲಿಮರ ಆದಾಯ ಹೆಚ್ಚಳವಾಗಿದೆ. ಮೊದಲು ಮುಸ್ಲಿಮರು 1 ಲಕ್ಷ ರೂಪಾಯಿ ಗಳಿಸಲು ಪರದಾಡುವ ಪರಿಸ್ಥಿತಿಯಿತ್ತು. ಆದರೆ ಈಗ, ಜಮಾಲ್ಪುರದಲ್ಲೇ 10 ಮುಸ್ಲಿಂ ಕುಟುಂಬಗಳು ಕೋಟಿ ಕೋಟಿ ಗಳಿಸುವಂತಾಗಿದೆ ಎಂದು ವಿವರಿಸಿದ್ದಾರೆ.
Leave A Reply