ಫೋನ್ ಮೂಲಕ ತಲಾಖ್ ನೀಡಿದ ಪತಿ, ನ್ಯಾಯಕ್ಕಾಗಿ ಪೊಲೀಸರ ಮೊರೆಹೋದ ಪತ್ನಿ
ಹೈದರಾಬಾದ್: ತ್ರಿವಳಿ ತಲಾಖ್ ಗೆ ಸುಪ್ರೀಂ ಕೋರ್ಟ್ ಬ್ಯಾನ್ ಮಾಡಿ ಆದೇಶ ಹೊರಡಿಸಿ ಹಲವು ತಿಂಗಳಾಗಿವೆ. ಆದರೂ ಹೈದರಾಬಾದ್ ನಲ್ಲೊಬ್ಬ ಭೂಪ ಫೋನ್ ನಲ್ಲಿ ತಲಾಖ್ ಹೇಳಿದ್ದಾನೆ. ಮದುವೆಯಾದ ತಿಂಗಳಲ್ಲೇ ತಲಾಖ್ ನೀಡಿದ್ದಾನೆ, ನನಗೆ ನ್ಯಾಯ ಕೊಡಿಸಿ ಎಂದು ಅನ್ಯಾಯಕ್ಕೊಳಗಾದ ಆತಿಯಾ ಬೇಗಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಅಕ್ಟೋಬರ್ 18 ರಂದು ಮದುವೆಯಾಗಿರುವ ಶೇಖ್ ಸರ್ದಾರ್ ಮಜರ್ ತಿಂಗಳು ಕಳೆಯುವ ಮುನ್ನವೇ ಫೋನ್ ಮೂಲಕ ಹೆಂಡಿತಿಗೆ ತಲಾಖ್ ನೀಡಿದ್ದು, ಆತಿಯಾಳೊಂದಿಗೆ ಕಳೆದ 11 ವರ್ಷದಿಂದ ಸಂಬಂಧ ಹೊಂದಿದ್ದ. ಆದರೆ ನವೆಂಬರ್ 13ರಂದು ಫೋನ್ ಮಾಡಿ ತಲಾಖ್ ನೀಡಿದ್ದು, ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆತಿಯಾ ದೂರಿದ್ದಾರೆ.
ಈ ಕುರಿತು ಶುಕ್ರವಾರ ಹೈದರಾಬಾದ್ ನ ಕುಲ್ಸಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಆತಿಯಾರನ್ನು ಭರೋಸಾ ಆಪ್ತಸಲಹಾ ಕೇಂದ್ರಕ್ಕೆ ಪ್ರಕರಣವನ್ನು ವಹಿಸಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಆತಿಯಾ ‘ಕಳೆದ ನಾಲ್ಕು ದಿನದಿಂದ ಅವರನ್ನು ಸಂಪರ್ಕಿಸಿ ಮನವೊಲಿಸಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
Leave A Reply