ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ದಲ್ವೀರ್ ಭಂಡಾರಿ ಮರು ಆಯ್ಕೆ!
Posted On November 21, 2017
ನ್ಯೂಯಾರ್ಕ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ನಿರೀಕ್ಷಿತ ಮನ್ನಣೆ ಸಿಕ್ಕಿದ್ದು, ಎರಡನೇ ಬಾರಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಮರು ಆಯ್ಕೆಯಾಗಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಮರು ಆಯ್ಕೆಗೆ ನಡೆದ ಚುನಾವಣೆಯಲ್ಲಿ ಭಂಡಾರಿ 193 ಮತಗಳಲ್ಲಿ 183 ಮತಗಳನ್ನು ಪಡೆದು ಮರು ಆಯ್ಕೆಯಾಗಿದ್ದಾರೆ. ಅಲ್ಲದೆ ಬ್ರಿಟನ್ ತಮ್ಮ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ಹುಡ್ ಅವರನ್ನು ಚುನಾವಣೆ ಕಣದಿಂದ ಹಿಂಪಡೆದ ಕಾರಣ ಭಂಡಾರಿ ಸಲೀಸಾಗಿ ಆಯ್ಕೆಯಾದರು.
ಜೋಧಪುರದ ದಲ್ವೀರ್ ಭಂಡಾರಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸಹ ಕಾರ್ಯನಿರ್ವಹಿಸಿದ್ದು, 2012ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದರು. ಆಗ ಅವರು 121 ಮತ ಪಡೆದಿದ್ದರು.
ಈಗ ಎರಡನೇ ಬಾರಿಯೂ ಆಯ್ಕೆಯಾಗಿದ್ದು, ಭಂಡಾರಿ ಸೇರಿ ಆಯ್ಕೆಯಾದ ಎಲ್ಲ ನ್ಯಾಯಮೂರ್ತಿಗಳಿಗೆ ಬ್ರಿಟನ್ ಅಭಿನಂದನೆ ಸಲ್ಲಿಸಿದೆ.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply