ಬೋದ್ ಗಯಾ ದಾಳಿಗೆ ಮ್ಯಾನ್ಮಾರಿನಲ್ಲಿ ಮುಸ್ಲಿಮರ ಮೇಲಿನ ದಾಳಿ ಕಾರಣ ಎಂದ ಉಗ್ರರು!

ದೆಹಲಿ: ಬಿಹಾರದ ಬೋದ್ ಗಯಾದ ಬುದ್ಧ ದೇವಾಲಯದ ಮೇಲೆ 2013ರಲ್ಲಿ ನಡೆದಿದ್ದ ಬಾಂಬ್ ದಾಳಿಗೆ ಕಾರಣ ಮಯನ್ಮಾರ್ ನಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯದ ಪ್ರತಿರೋಧವೇ ಕಾರಣ ಎಂದು ಆರೋಪಿ ಉಗ್ರರು ತಿಳಿಸಿದ್ದಾರೆ. ಬಾಂಬ್ ದಾಳಿ ಆರೋಪಿ 18 ವರ್ಷದ ಬಾಲಾಪರಾಧಿ ಈ ಮಾಹಿತಿ ನೀಡಿದ್ದು, ರಾಷ್ಟ್ರೀಯ ತನಿಖಾ ದಳ ನಡೆಸಿದ ವಿಚಾರಣ ವೇಳೆ ಬಾಯಿ ಬಿಟ್ಟಿದ್ದಾನೆ.
2013ರಲ್ಲಿ ಬಾಲಾಪರಾಧಿಯಾಗಿದ್ದ ಸದ್ಯ 18 ವರ್ಷದ ಉಗ್ರ ಸೇರಿ ಐದು ಜನರ ತಂಡ ಬೋದ್ ಗಯಾದಲ್ಲಿನ ಬುದ್ಧನ ಮೂರ್ತಿಯಿರುವ 80 ಅಡಿ ದೂರದಲ್ಲೇ ಬಾಂಬ್ ದಾಳಿ ನಡೆಸಿದ್ದ. ಬಾಂಬ್ ದಾಳಿ ನಡೆಸುವ ಮೂಲಕ ವಿಶ್ವಕ್ಕೆ ಮುಸ್ಲಿಮರ ತಾಕತ್ತನ್ನು ತೋರಿಸುವ ಸಂದೇಶ ನೀಡಲಾಗಿದೆ ಎಂದು ಬಾಲಾಪರಾಧಿ ತಿಳಿಸಿದ್ದಾನೆ. ಬಾಂಬ್ ದಾಳಿ ನಡೆಸಿದ್ದ ಆರೋಪದ ಮೇಲೆ ಬಾಲಕನನ್ನು ಬಾಲಗೃಹಕ್ಕೆ ಕಳುಹಿಸಲಾಗಿತ್ತು.
ರಾಷ್ಟ್ರೀಯ ತನಿಖಾ ದಳದ ಮಾಹಿತಿ ಪ್ರಕಾರ ‘ಬೋದ್ ಗಯಾದ ದೇವಾಲಯದಲ್ಲಿ ಐದು ಉಗ್ರರ ತಂಡ 13 ಬಾಂಬ್ ಗಳನ್ನು ಇಟ್ಟಿತ್ತು. ಅದರಲ್ಲಿ ಕೇವಲ ಎರಡು ಬಾಂಬ್ ಗಳು ಬ್ಲಾಸ್ಟ್ ಆಗಿದ್ದವು. ಇಬ್ಬರು ಬೌದ್ಧ ಭಿಕ್ಷುಗಳು ಗಾಯಗೊಂಡಿದ್ದರು. ಉಳಿದ ಬಾಂಬ್ ಗಳನ್ನು ಪೊಲೀಸರು ನಿಷ್ಕೃಯಗೊಳಿಸಿದ್ದರು. ಆರೋಪಿಗಳಾದ ಹೈದರ್ ಅಲಿ, ಮುಜಿಬುಲ್ಹಾ, ಇಮ್ತಿಯಾಜ್, ತಾರಿಖ್ ಅನ್ಸಾರಿ ಮತ್ತು ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ಎಲ್ಲ ಉಗ್ರರು ಇಡೀ ಬಾಂಬ್ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. ಉಗ್ರ ಹೈದರ್ ನಿಷೇಧಿತ ಸ್ಟುಡೆಂಟ್ ಇಸ್ಲಾಮಿಕ್ ಮೂವಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯನಾಗಿದ್ದ ಎಂಬ ಮಾಹಿತಿ ಹೊರಬಿದಿದೆ.
ಬೋದ್ ಗಯಾದ ಮೇಲೆ ಬಾಂಬ್ ದಾಳಿ ನಡೆಸಿರುವ ಉಗ್ರ ಯುವಕನ ಹೇಳಿಕೆಯಿಂದ ರೋಹಿಂಗ್ಯಾ ಮುಸ್ಲಿಮರ ಮೇಲಿನ ವಿಶ್ವಾಸ ಮತ್ತಷ್ಟು ಕುಗ್ಗಿದೆ. ಭಾರತದಲ್ಲಿ ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕು ಎನ್ನುವವರಿಗೆ ತಕ್ಕ ಉತ್ತರ ನೀಡಿದಂತಾಗಿದೆ.
ದೇಶಕ್ಕೆ ಕಂಟಕವಾಗಿದ್ದಾರೆ ಎಂದು ಮಯನ್ಮಾರ್ ನಲ್ಲಿನ ಮುಸ್ಲಿಮರನ್ನು ದೇಶದಿಂದ ಗಡಿಪಾರು ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿತ್ತು. ಅಲ್ಲದೇ ರೋಹಿಂಗ್ಯಾ ಮುಸ್ಲಿರು ವಿಧ್ವಸಂಕ ಕೃತ್ಯ ಮಾಡುತ್ತಿದ್ದಾರೆ. ದೇಶದ ರಕ್ಷಣೆಗೆ ಸವಾಲಾಗಿದ್ದಾರೆ ಎಂಬ ಆರೋಪಗಳು ಅವರ ವಿರುದ್ಧ ಕೇಳಿ ಬಂದಿದ್ದವು.
Leave A Reply