ಇಸ್ರೇಲ್ ದೇಶದಿಂದ ಶಸ್ತ್ರಾಸ್ತ್ರ ಖರೀದಿ ರದ್ದು, ಇದು ಮೇಕ್ ಇಂಡಿಯಾ ಮೇನಿಯಾ!
ದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ನೀಡುತ್ತಿದ್ದು, ಅದು ಶಸ್ತ್ರಾಸ್ತ್ರ ವಿಷಯದಲ್ಲೂ ಮುಂದುವರಿದೆ. ಇದರ ಭಾಗವಾಗ ಭಾರತ ಇಸ್ರೇಲಿನಿಂದ ಖರೀದಿಸಲು ಮುಂದಾಗಿದ್ದ ಮಾನವ ಸಹಿತ ಟ್ಯಾಂಕರ್ ರಹಿತ ಕ್ಷಿಪಣಿ ಆಮದಿನ 500 ದಶಲಕ್ಷ ಡಾಲರ್ ಮೊತ್ತದ ಖರೀದಿ ಒಪ್ಪಂದ ರದ್ದುಗೊಳಿಸಿದೆ.
ಅಲ್ಲದೆ, ಈ ಎಂಪಿಎಟಿಜಿಎಂ ಕ್ಷಿಪಣಿಗಳನ್ನು ದೇಶದಲ್ಲೇ ತಯಾರಿಸಬೇಕು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಗೆ ಕೇಂದ್ರ ರಕ್ಷಣಾ ಸಚಿವಾಲಯ ಸೂಚನೆ ನೀಡಿದೆ. ಆ ಮೂಲಕ ಭಾರತ ರಕ್ಷಣಾ ವ್ಯವಸ್ಥೆಯಲ್ಲೂ ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.
500 ದಶಲಕ್ಷ ಮಿಲಿಯನ್ ಡಾಲರ್ ವೆಚ್ಚದಲ್ಲಿ ಕಳೆದ ವರ್ಷ ಭಾರತ ಇಸ್ರೇಲ್ ಜತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿತ್ತು. ಈ ಒಪ್ಪಂದ ಪ್ರಸ್ತುತ ಪ್ರಸ್ತಾಪದ ಹಂತ ತಲುಪಿತ್ತು. ಆದರೆ ಭಾರತ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲು ಒಪ್ಪಂದ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
ಮೂರನೇ ಜನರೇಷನ್ ನ ಈ ಟ್ಯಾಂಕ್ ರಹಿತ ಕ್ಷಿಪಣಿಗಳು 2.5 ಕಿಲೋ ಮೀಟರ್ ಚಲಿಸಿ, ಶತೃವಿನ ಯುದ್ಧ ಟ್ಯಾಂಕರ್ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದ್ದು, ಹಗಲು ಹಾಗೂ ರಾತ್ರಿ ಕೆಲಸ ಮಾಡುತ್ತವೆ.
ಮೂರು ಅಥವಾ ನಾಲ್ಕು ವರ್ಷಗಳಲ್ಲಿ ಭಾರತವೇ ಈ ಕ್ಷಿಪಣಿ ತಯಾರಿಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ಪ್ರಸ್ತುತ ಸೈನ್ಯದ ದಾಸ್ತಾನಿನಲ್ಲಿ ಇಂಥ 68 ಸಾವಿರ ಕ್ಷಿಪಣಿಗಳಿವೆ.
Leave A Reply