3 ಲಷ್ಕರ್ ಉಗ್ರರನ್ನು ಜನತ್ ಗೆ ಕಳುಹಿಸಿದ ಸೇನೆ
Posted On November 22, 2017
ಹಂದ್ವಾರ್: ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡೆಯುವ ಕಾರ್ಯಾಚರಣೆ ಮುಂದುವರಿಸಿದ್ದು, ಮಂಗಳವಾರವೂ ಲಷ್ಕರ್ ಇ ತಯ್ಯಬಾ ಸಂಘಟನೆಯ ಪಾಕಿಸ್ತಾನ ಮೂಲದ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಡಿಜಿಪಿ ಎಸ್ ಪಿ ವೇದ ಸೇನೆ ಕಾರ್ಯಾಚರಣೆ ಕುರಿತು ಮಾತನಾಡಿದ್ದು, ನಮ್ಮ ಸೈನಿಕರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಮೂರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ 26/11ರ ಪ್ರಮುಖ ಆರೋಪಿ ಜಾಕೀರ್ ರೆಹೆಮಾನ್ ಲಕ್ವಿ ಸಂಬಂಧಿ ಸೇರಿ 6 ಭಯೋತ್ಪಾದಕರನ್ನು ಸ್ವರ್ಗಕ್ಕೆ ಕಳುಹಿಸಿದ್ದರು. ಅಲ್ಲದೇ ಸೇನೆಯ ಮನವಿಗೆ ಸ್ಪಂದಿಸಿ, ಇಬ್ಬರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಅಲ್ಲದೇ ಸೇನೆ ಭಯೋತ್ಪಾದನೆ ಬಿಟ್ಟು ಬರದಿದ್ದರೇ ಸ್ವರ್ಗದ ಹಾದಿ ತೋರಿಸುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿದ್ದು, ಆ ನಿಟ್ಟಿನಲ್ಲಿ ದಂಡವಾದರೇ ದಂಡ, ಹೂಗುಚ್ಚವಾದರೇ ಹೂಗಚ್ಚ ನೀಡಿ ಸ್ವಾಗತಿಸುವ ಕ್ರಮ ಕೈಗೊಳ್ಳುತ್ತಿದೆ.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply