ಚಳಿಗಾಲ ಅಧಿವೇಶನದಲ್ಲಿ ತ್ರಿವಳಿ ತಲಾಖ್ ನೀಡುವವರ ಚಳಿ ಬಿಡಸಲಿದೆ ಸರ್ಕಾರ!
ದೆಹಲಿ: ಕಳೆದ ಆಗಸ್ಟ್ ನಲ್ಲಿ ತ್ರಿವಳಿ ತಲಾಖ್ ರದ್ದುಗೊಳಿಸಿ ಮುಸ್ಲಿಂ ವಿಕೃತ ಮನಸ್ಸುಗಳಿಗೆ ಛಡಿಯೇಟು ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವೂ ತ್ರಿವಳಿ ತಲಾಖ್ ನೀಡುವವರ ಚಳಿ ಬಿಡಿಸಲು ಮುಂದಾಗಿದೆ.
ತ್ರಿವಳಿ ತಲಾಖ್ ಹೆಡೆಮುರಿಕಟ್ಟಲು ಈಗ ಇರುವ ಕಾನೂನು ತಿದ್ದುಪಡಿ ಮಾಡುವುದೇ ಅಥವಾ ಚಳಿಗಾಲದ ಅಧಿವೇಶನದಲ್ಲಿ ತ್ರಿವಳಿ ತಲಾಖ್ ವಿರುದ್ಧ ಮಸೂದೆ ಮಂಡಿಸುವುದೇ ಎಂಬ ಕುರಿತು ಪರಿಶೀಲನೆ ನಡೆಸಿದ್ದು, ಸಚಿವರ ಸಮಿತಿ ರಚಿಸಲಾಗಿದೆ.
ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ರದ್ದುಗೊಳಿಸಿದರೂ, ದೇಶದ ಹಲವೆಡೆ ತ್ರಿವಳಿ ತಲಾಖ್ ಪ್ರಕರಣ ಸುದ್ದಿಯಾಗುತ್ತಿವೆ. ಇತ್ತೀಚೆಗಷ್ಟೇ ಅಲೀಗಡ ವಿವಿ ಪ್ರಾಧ್ಯಾಪಕನೊಬ್ಬ ಪತ್ನಿಗೆ ವಾಟ್ಸ್ ಆ್ಯಪ್ ಮೂಲಕ ತ್ರಿವಳಿ ತಲಾಖ್ ನೀಡಿದ್ದ.
ಹೀಗೆ ದೇಶಾದ್ಯಂತ ಮುಸ್ಲಿಂ ಮಹಿಳೆಯರಿಗೆ ಶೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಮಂಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಳೆದ ಆಗಸ್ಟ್ ನಲ್ಲಿ ತ್ರಿವಳಿ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದಲ್ಲದೇ, ಈ ಕುರಿತು ಕಾನೂನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.
Leave A Reply