ಕಾಶ್ಮೀರ ಹೆಸರಲ್ಲಿ ಹಣಕ್ಕಾಗಿ ನಂಗಾನಾಚ್ ಕಾರ್ಯಕ್ರಮ ಏರ್ಪಡಿಸಿದ ಪಾಕಿಸ್ತಾನ
ದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸಹಾಯ ಮಾಡಲು ಪಾಕಿಸ್ತಾನ ಲಂಡನ್ ನಲ್ಲಿ ನಂಗಾನಾಚ್ ಕಾರ್ಯಕ್ರಮ ಏರ್ಪಡಿಸಿದ್ದು, ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಸರ್ದಾರ್ ಮಸೂದ್ ಖಾನ್ ಭಾಗವಹಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ನೃತ್ಯ ಕಾರ್ಯಕ್ರಮದಲ್ಲಿ ಅರೆ ಬರೆ ಬಟ್ಟೆ ತೊಟ್ಟ ಯುವತಿಯರು ನೃತ್ಯ ಮಾಡುತ್ತಿರುವ ದೃಶ್ಯ ಪಾಕಿಸ್ತಾನದ 92 ಚಾನೆಲ್ ನಲ್ಲಿ ಪ್ರಸಾರವಾಗಿದೆ. ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪೋಕ್ ಅಧ್ಯಕ್ಷ ಮಸೂದ್ ಖಾನ್ ಅರೆ ಬರೆ ಬಟ್ಟೆ ತೊಟ್ಟ ಯುವತಿಯರು ನೃತ್ಯವನ್ನು ಮಜಾ ಮಾಡುತ್ತಿರುವುದು ಕಂಡು ಬಂದಿದೆ.
ಕಾಶ್ಮೀರ ಹೋರಾಟಕ್ಕಾಗಿ ದೇಣಿಗೆ ಸಂಗ್ರಹಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಭಾರತದ ಕೇಂದ್ರ ಸರ್ಕಾರದ ಜಾರಿ ತಂದಿರುವ ನೋಟ್ಯಂತರದಿಂದ ಕಾಶ್ಮೀರ ಹೋರಾಟಗಾರರಿಗೆ ಬರುತ್ತಿರುವ ನಕಲಿ ನೋಟುಗಳಿಗೆ ತಡೆ ಎದುರಾಗಿದೆ. ಇದರಿಂದ ಹಣಕ್ಕಾಗಿ ಬೇರೆ ಬೇರೆ ಮೂಲ ಹುಡುಕಾಡುತ್ತಿರುವ ಕಾಶ್ಮೀರ ಅಜಾದಿ ಹೋರಾಟಗಾರರು ಇದೀಗ ಇಂತಹ ಕಾರ್ಯಕ್ರಮಗಳ ಮೂಲಕ ಹಣಕ್ಕಾಗಿ ಭಿಕ್ಷೆ ಬೇಡುತ್ತಿವೆ ಎನ್ನಲಾಗುತ್ತಿದೆ.
Leave A Reply