ಮಮತಾ ಬ್ಯಾನರ್ಜಿ ನಾಡಿನಲ್ಲಿ ಬಾಂಗ್ಲಾದೇಶದ ಇಬ್ಬರು ಶಂಕಿತ ಉಗ್ರರ ಬಂಧನ
ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೃಪಾಕಟಾಕ್ಷದಿಂದ ಪ್ರಸ್ತುತ ಪಶ್ಚಿಮ ಬಂಗಾಳ ಬಾಂಗ್ಲಾದೇಶಿಯರ ಬೀಡಾಗುತ್ತಿದ್ದು, ಇಬ್ಬರು ಬಾಂಗ್ಲಾ ಶಂಕಿತ ಉಗ್ರರನ್ನು ಕೋಲ್ಕತ್ತಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಲ್ ಖೈದ್ ಪೋಷಿತ ಬಾಂಗ್ಲಾದೇಶದ ಉಗ್ರ ಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ತಂಡದ ಒಬ್ಬ ಹಾಗೂ ಮತ್ತೊಬ್ಬ ಶಸ್ತ್ರಾಸ್ತ್ರ ದಲ್ಲಾಳಿಯನ್ನು ಪೊಲೀಸರು ಬಂಧಿಸಿದ್ದು, ಒಬ್ಬನ ಬಳಿ ನಕಲಿ ಆಧಾರ್ ಕಾರ್ಡ್ ಇರುವುದು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.
ರೈಲು ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ ಷಂಷಾದ್ ಮಿಯಾ (26), ರಿಜಾವುಲ್ ಇಸ್ಲಾಂ (25) ಎಂಬುವವರನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ ಇಬ್ಬರೂ ಬಾಂಗ್ಲಾದೇಶೀಯರಾಗಿದ್ದು, ನಿಷೇಧಿತ ಅನ್ಸಾರುಲ್ಲ ಬಾಂಗ್ಲಾ ತಂಡದ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ ಎಂದು ವಿಶೇಷ ಕಾರ್ಯ ಪಡೆ ಉಪ ಆಯುಕ್ತ ಮುರಳೀಧರ್ ಶರ್ಮಾ ತಿಳಿಸಿದ್ದಾರೆ.
ಇಬ್ಬರೂ ಭಾರತಕ್ಕೆ ಬಾಂಬ್ ತಯಾರಿಸಲು ಕೆಮಿಕಲ್ ಖರೀದಿಗಾಗಿ ಬಂದಿದ್ದು, ಬಾಂಗ್ಲಾ ಉಗ್ರ ಸಂಘಟನೆಯಲ್ಲಿ ಶಂಷಾದ್ ಉನ್ನತ ಹುದ್ದೆ ಹೊಂದಿದ್ದಾನೆ.ಅಲ್ಲದೆ ಈತ ಭಾರತದ ನಕಲಿ ಆಧಾರ್ ಕಾರ್ಡ್ ಸಹ ಹೊಂದಿದ್ದಾನೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಉಗ್ರರ ಚಲವಲನ ಆಧರಿಸಿ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂಬ ಆರೋಪ ಸಹ ಕೇಳಿಬಂದಿವೆ.
Leave A Reply