ರಾಫೇಲ್ ಯುದ್ಧ ವಿಮಾನ ಖರೀದಿ, ಯುಪಿಎ ಸರ್ಕಾರಕ್ಕಿಂತ ಮೋದಿ ಸರ್ಕಾರಕ್ಕೆ ಶೇ.16ರಷ್ಟು ರಿಯಾಯಿತಿ!
Posted On November 22, 2017

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನಿಂದ ಭಾರತಕ್ಕೆ ಮತ್ತೆ ಅನುಕೂಲವಾಗಿದೆ. ಯುಪಿಎ ಸರ್ಕಾರ 10 ವರ್ಷ ಆಡಳಿತ ನಡೆಸಿದರೂ, ಯುದ್ಧ ವಿಮಾನ ಖರೀದಿಯಲ್ಲೂ ಹಗರಣ ಮಾಡಿತು. ಆದರೆ ಅದೇ ಎನ್ ಡಿಎ ಸರ್ಕಾರ ಯುದ್ಧ ವಿಮಾನ ಖರೀದಿಯಲ್ಲೂ ಅಪಾರ ಹಣ ಉಳಿಸಿದೆ.
ಕೇಂದ್ರ ಸರ್ಕಾರ ಫ್ರಾನ್ಸಿನಿಂದ 60 ಸಾವಿರ ಕೋಟಿ ರೂಪಾಯಿ ವ್ಯಯಿಸಿ 36 ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ.
ಇದು ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದಕ್ಕಿಂತ ಶೇ.16ರಷ್ಟು ರಿಯಾಯಿತಿ ಅನ್ವಯ ಮಾಡಿಕೊಂಡ ಒಪ್ಪಂದವಾಗಿದೆ. ಅಂದರೆ ಈ ಒಪ್ಪಂದದಿಂದ ಭಾರತಕ್ಕೆ ಬರೋಬ್ಬರಿ 16 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ.
ಭಾರತಕ್ಕೆ ಪ್ರಸ್ತುತ 126 ಯುದ್ಧ ವಿಮಾನಗಳ ಅವಶ್ಯಕತೆಯಿದ್ದು, ಯುದ್ಧವಿಮಾನ ಹಾರಾಟ ಪ್ರದೇಶ ಹಾಗೂ ಅವಶ್ಯಕತೆಗನುಗುಣವಾಗಿ 36 ಯುದ್ಧವಿಮಾನ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
- Advertisement -
Leave A Reply