ಮನೆ ಮಾಳಿಗೆ ಮೇಲೆ ನಿರ್ಮಿಸಿದ ವಿಮಾನಕ್ಕೆ ಆ ಪೈಲಟ್ ಇಟ್ಟ ಹೆಸರು ಮೋದಿ!
ಮುಂಬೈ: ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅಲೆ ಎಲ್ಲೆಡೆಯೂ ತೇಲಾಡುತ್ತಿದೆ. ವಿಶ್ವಮಟ್ಟದಲ್ಲೂ ಮೋದಿ ಮೋಡಿ ಹೆಸರು ಮಾಡಿದೆ. ಮೋದಿ ಸರ್ಕಾರ ವಿಶ್ವದ ಮೂರನೇ ವಿಶ್ವಾಸಾರ್ಹ ಸರ್ಕಾರ ಎಂಬ ಖ್ಯಾತಿಯೂ ಸಿಕ್ಕದೆ. ಏತನ್ಮಧ್ಯೆಯೂ ಮುಂಬೈನ ಪೈಲಟ್ ಒಬ್ಬ ತನ್ನ ಮನೆ ಮಾಳಿಗೆ ಮೇಲೆ ನಿರ್ಮಿಸಿದ ವಿಮಾನಕ್ಕೂ ಮೋದಿ ಹೆಸರು ಇಡುವ ಮೂಲಕ್ಕೂ ಆಕಾಶದಲ್ಲೂ ಮೋದಿ ಹೆಸರು ಝಗಮಗಿಸುವಂತೆ ಮಾಡಿದ್ದಾನೆ.
ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಪೈಲಟ್ ಆಗಿರುವ ಮುಂಬೈನ ಕ್ಯಾಪ್ಟನ್ ಅಮೋಲ್ ಯಾದವ್ ಗೆ ಸ್ವಂತ ವಿಮಾನ ನಿರ್ಮಿಸುವ ಕನಸಿತ್ತು. ತನ್ನ ಮನೆಯನ್ನೂ ಮಾರಿ ವಿಮಾನ ಹಾರಾಟ ಮಾಡಲು ಡಿಡಿಸಿಎ ಪರವಾನಗಿ ಬೇಕಿತ್ತು.
ಆತ ಹೇಗೋ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದ್ದು, ಮೋದಿ ಪರವಾನಗಿ ಕೊಡಿಸಿದ್ದಾರೆ. 2011ರಿಂದ ಸತತ ಪರಿಶ್ರಮಟ್ಟ ಯಾದವ್ ಕೊನೆಗೂ ಮನೆ ಮಾರಿ ಮಾಳಿಗೆ ಮೇಲೆಯೇ ವಿಮಾನ ತಯಾರಿಸಿದ್ದಾರೆ. ಮೋದಿ ಪರವಾನಗಿ ಕೊಡಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಆತ ವಿಮಾನಕ್ಕೆ ಮೋದಿ ಅಂತಲೇ ಹೆಸರಿಟ್ಟು ಕೃತಜ್ಞತೆ ಮೆರೆದಿದ್ದಾರೆ. ಅಲ್ಲದೆ ಯಾದವ್ ಅವರ ಈ ಪ್ರಯತ್ನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಕಾರ ಸಹ ಇದೆ. ಆ ನೆನಪಿಗಾಗಿ ಆತ ವಿಮಾನಕ್ಕೆ, “ವಿಕ್ಟರ್ ಟ್ಯಾಂಗೋ ನರೇಂದ್ರ ಮೋದಿ ದೇವೇಂದ್ರ” ಎಂದು ಹೆಸರಿಟ್ಟಿದ್ದಾರೆ.
ಈ ಉತ್ಸಾಹಿ ಪೈಲಟ್ 4-5 ತಿಂಗಳಲ್ಲಿ 19 ಆಸನದ ವ್ಯವಸ್ಥೆ ಇರುವ ವಿಮಾನ ತಯಾರಿಸುವ ಗುರಿ ಹೊಂದಿದ್ದಾರೆ. ಅಲ್ಲದೆ ಸ್ವಂತ ವಿಮಾನ ಯಾನ ಸಂಸ್ಥೆ ಸ್ಥಾಪನೆ ಮಾಡುವ ಕನಸು ಹೊತ್ತಿದ್ದಾರೆ. ಒಂದು ದೇಶದ ಪ್ರಧಾನಿಯಾಗಿ ಮೋದಿ ಇಂಥ ಸ್ಫೂರ್ತಿ ತುಂಬುತ್ತಿರುವುದು ಹೆಮ್ಮೆಯ ವಿಷಯವೇ. ಆಲ್ ದಿ ಬೆಸ್ಟ್ ಅಮೋಲ್ ಯಾದವ್!
Leave A Reply