ದೇಶದ ಮಹಿಳಾ ಸಬಲೀಕರಣಕ್ಕೊಂದು ನಿದರ್ಶನ, ನೌಕಾಪಡೆಗೆ ಮೊದಲ ಬಾರಿಗೆ ಮಹಿಳಾ ಪೈಲಟ್ ಗಳ ನೇಮಕ!
Posted On November 24, 2017
0
ದೆಹಲಿ: ದೇಶದಲ್ಲಿ ಮಹಿಳಾ ಸಬಲೀಕರಣ ಎಂಬುದು ಬರೀ ರಾಜಕೀಯ ಹಾಗೂ ರಾಹುಲ್ ಗಾಂಧಿಯಂಥ ನಾಯಕರ ಒಣ ಘೋಷಣೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣವನ್ನು ವಾಸ್ತವದಲ್ಲಿ ಜಾರಿಗೆ ತಂದಿದ್ದು, ಭಾರತೀಯ ನೌಕಾಪಡೆಗೆ ಇದೇ ಮೊದಲ ಬಾರಿಗೆ ಮಹಿಳಾ ಪೈಲಟ್ ಗಳನ್ನು ನೇಮಿಸಲಾಗಿದೆ.
ನವದೆಹಲಿಯ ಆಸ್ತಾ ಸೆಹಗಲ್, ಪುದುಚೇರಿಯ ಎ.ರೂಪಾ, ಕೇರಳದ ಶಕ್ತಿ ಮಾಯಾ ಹಾಗೂ ಉತ್ತರಪ್ರದೇಶದ ರಾಯಬರೇಲಿ ಮೂಲದ ಶುಭಾಂಗಿ ಸ್ವರೂಪ್ ಪೈಲಟ್ ಗಳನ್ನಾಗಿ ನೇಮಿಸಲಾಗಿದೆ.
ನೌಕಾಪಡೆಯ ಶಸ್ತ್ರಾಸ್ತ್ರ ಪರಿಶೀಲನೆ ವಿಭಾಗಕ್ಕೆ ಇವರನ್ನು ಆಯ್ಕೆ ಮಾಡಿ ರಕ್ಷಣಾ ಇಲಾಖೆ ಆದೇಶ ಹೊರಡಿಸಿದ್ದು, ಇದು ನೌಕಾಪಡೆಗೆ ಹೆಮ್ಮೆಯ ವಿಷಯವಾಗಿದೆ.
ಈ ಆದೇಶದಿಂದ ಮಹಿಳೆಯರೂ ಮಹತ್ತರ ಜವಾಬ್ದಾರಿ ನಿಭಾಯಿಸಬಲ್ಲರು ಎಂಬುದು ಸಾಬೀತಾಗಿದ್ದು, ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ. ಮತ್ತಷ್ಟು ಮಹಿಳೆಯರು ನೌಕಾಪಡೆ ಸೇರಿ ಹಲವು ವಿಭಾಗಗಳಿಗೆ ನೇಮಕ ಮಾಡಿದರೆ ಮಹಿಳೆಯರು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗಿದೆ.
Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
February 12, 2026









