ಹಫೀಜ್ ಸಯೀದ್ ಬಿಡುಗಡೆಯಷ್ಟೇ ಅಲ್ಲ, ಪಾಕಿಸ್ತಾನಕ್ಕೆ ಸಲ್ಲಿಸಿದ ಉಗ್ರನ ಪಟ್ಟಿಯಲ್ಲೂ ಆತನ ಹೆಸರಿರಲಿಲ್ಲ.
ದೆಹಲಿ: 26/11ರ ಮುಂಬೈ ಮೇಲಿನ ಉಗ್ರರ ದಾಳಿಯ ರೂವಾರಿ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ
ಭಯೋತ್ಪಾದನೆಯನ್ನು ಪಾಕಿಸ್ತಾನ ಹೇಗೆ ಮುಖ್ಯವಾಹಿನಿಗೆ ತರಲು ಯತ್ನಿಸುತ್ತದೆ ಎಂಬುದಕ್ಕೆ ಪಾಕಿಸ್ತಾನ ಹಫೀಜ್ ಸಯೀದ್ ನನ್ನು ಬಿಡುಗಡೆಗೊಳಿಸಿದ್ದೇ ನಿದರ್ಶನ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಅಷ್ಟೇ ಅಲ್ಲ ಇತ್ತೀಚೆಗೆ ಅಮೆರಿಕ ಒತ್ತಾಯದ ಮೇರೆಗೆ ಪಾಕಿಸ್ತಾನಿ ಉಗ್ರರ ಪಟ್ಟಿ ನೀಡಲಾಗಿತ್ತು. ಆದರೆ, ಅದರಲ್ಲಿ ಜಮಾತ್ ಉದ್ ದವಾ ಮುಖ್ಯಸ್ಥ, ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಹೆಸರನ್ನೇ ಸೇರಿಸಿರಲಿಲ್ಲ.
ಹಾಗಾಗಿ, ಪಾಕಿಸ್ತಾನ ಬಾಯಿಮಾತಿಗಷ್ಟೇ ಭಯೋತ್ಪಾದನೆ ವಿರುದ್ಧ ಮಾತನಾಡುತ್ತದೆ. ಆದರೆ ಹಫೀಜ್ ಸಯೀದ್ ಬಿಡುಗಡೆಗೊಳಿಸಿರುವುದು ಎಷ್ಟರಮಟ್ಟಿಗೆ ಪಾಕಿಸ್ತಾನ ಉಗ್ರರನ್ನು ಶಿಕ್ಷಿಸುತ್ತದೆ ಎಂಬುದು ತಿಳಿಯುತ್ತದೆ ಎಂದು ರವೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತು ತಿಂಗಳಿಂದ ಪಾಕಿಸ್ತಾನದ ಗೃಹಬಂಧನದಲ್ಲಿದ್ದ ಹಫೀಜ್ ಸಯೀದ್ ನನ್ನು ಬಿಡುಗಡೆಗೊಳಿಸಿ ಲಾಹೋರ್ ಹೈಕೋರ್ಟ್ ಆದೇಶ ನೀಡಿತ್ತು.
ಹಫೀಜ್ ಸಯೀದ್ ನ ಗೃಹಬಂಧನದಿಂದ ಬಿಡುಗಡೆಗೊಳಿಸಿದ್ದು ಹಾಗೂ ಉಗ್ರರ ಪಟ್ಟಿಗೆ ಆತನ ಹೆಸರು ಸೇರಿಸದೆ ಇರುವುದು ಪಾಕಿಸ್ತಾನದ ಭಯೋತ್ಪಾದನೆ ಪರ ನಿಲುವು ತಿಳಿಯುತ್ತದೆ.
Leave A Reply