ಐಸಿಸ್ ಸೇರಲು ತೋಳೆರಿಸುತ್ತಿರುವವರೇ ಇಲ್ಲಿ ಕೇಳಿ, ಅದೇ ಐಸಿಸ್ 15 ಸಹಚರರದ್ದೇ ತಲೆ ತಗೆದಿದೆ…!
Posted On November 24, 2017

ಜಲಾಲಾಬಾದ್ (ಅಫ್ಘಾನಿಸ್ತಾನ): ಐಸಿಸ್ ಉಗ್ರ ಸಂಘಟನೆ ಸೇರಲು ದೊಡ್ಡ ತಂಡವೇ ತೋಳೆರಿಸಿ, ನಾವು ಒಂದು ಕೈ ನೋಡಿಯೇ ಬಿಡುವಾ ಎಂದು ಸಜ್ಜಾಗುತ್ತಿದೆ. ಆದರೆ ಮಕ್ಕಳು, ಮಹಿಳೆಯರು ಎನ್ನದೇ ಜೀವ ತೆಗೆಯುತ್ತಿದ್ದ ಐಸಿಸ್ ಉಗ್ರರು ಇಗ ತಮ್ಮದೇ ಸಂಘಟನೆಯ 15 ಸಹಚರರ ತಲೆ ಉರುಳಿಸಿರುವ ಆಘಾತಕಾರಿ ವಿಷಯ ಹೊರ ಬಿದ್ದಿದೆ.
ಅಪಘಾನಿಸ್ತಾನದಲ್ಲಿ ನಿತ್ಯ ಮುಗ್ದರನ್ನು ಬಲಿ ಪಡೆಯುತ್ತಿದ್ದ ಉಗ್ರರು ತಮ್ಮದೇ ಸಹಚರರಲ್ಲಿ ಸ್ವಲ್ಪ ಏರುಪೇರು ಕಂಡು ಬಂದಿದ್ದರಿಂದ ಮಾನವ ಬಾಂಬ್ ಕಟ್ಟಿಸಿ ಕೊಲೆ ಮಾಡಿದ್ದಾರೆ. ಪಾಕಿಸ್ತಾನ ಗಡಿಯಲ್ಲಿ ಈ ಹೀನ ಕೃತ್ಯ ನಡೆದಿದೆ. ಇದು ಭಾರತದಿಂದ ಐಸಿಸ್ ಸೇರಲು ಹವಣಿಸುತ್ತಿರುವ ಯುವಕರಿಗೆ ಎಚ್ಚರಿಕೆಯ ಕರೆಗಂಟೆಯನ್ನೂ ನೀಡಿದೆ.
ತಾಲಿಬಾನ್ ಮತ್ತು ಐಸಿಸ್ ಅಮೆರಿಕಾ ಸೈನ್ಯವನ್ನು ಗುರಿಯಾಗಿಟ್ಟುಕೊಂಡು ಕಾರ್ಯಚರಣೆ ನಡೆಸುತ್ತಿದ್ದು, ತಮ್ಮ ಸಂಘಟನೆಯಲ್ಲಿ ಭಿನ್ನಮತ ಸೃಷ್ಟಿಯಾಗಿದೆ. ಇದರಿಂದ ತಮ್ಮ ಸಂಘಟನೆಯವರನ್ನೇ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಅಪಘಾನಿಸ್ಥಾನದ ಮೂಲಗಳು ತಿಳಿಸಿವೆ.
- Advertisement -
Trending Now
ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
March 23, 2023
ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
March 22, 2023
Leave A Reply