ಅಧಿವೇಶನ ವಿಷಯದಲ್ಲೂ ಮೋದಿ ಅವರನ್ನು ಟೀಕಿಸಿದ ಪ್ರತಿಪಕ್ಷಗಳೇ ಕೇಳಿ, ಸಂಸತ್ ಚಳಿಗಾಲದ ಅಧಿವೇಶನ ಡಿ.15ರಿಂದ
ದೆಹಲಿ: ಪ್ರಸಕ್ತ ಸಾಲಿನ ಸಂಸತ್ ಚಳಿಗಾಲದ ಅಧಿವೇಶನ ಯಾವಾಗ ಎಂದು ಪದೇಪದೆ ಕೇಳುತ್ತಿದ್ದ, ಈ ವಿಷಯದಲ್ಲೂ ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಪ್ರತಿಪಕ್ಷಗಳಿಗೆ ಕೊನೆಗೂ ಉತ್ತರ ಸಿಕ್ಕಿದ್ದು, ಡಿ.15ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ.
ಈ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸ್ಪಷ್ಟಪಡಿಸಿದ್ದು, ಡಿ.15ರಿಂದ ಜನವರಿ 5ರವರೆಗೆ ಅಧಿವೇಶನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಡಿ.25, 26ರಂದು ರಜೆ ಘೋಷಿಸಲಾಗಿದ್ದು, ಒಟ್ಟು 14 ದಿನ ಅಧಿವೇಶನದ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಅಧಿವೇಶನ ಯಶಸ್ವಿಯಾಗಲು ಹಾಗೂ ಸುಗಮವಾಗಿ ನಡೆಯಲು ಪ್ರತಿಪಕ್ಷಗಳು ಬೆಂಬಲ ನೀಡಬೇಕು. ಹೊಸ ವರ್ಷದ ದಿನವೂ ಅಧಿವೇಶನ ನಡೆಯಲಿದೆ ಎಂದು ಅನಂತಕುಮಾರ್ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಬುಧವಾರ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಅಧಿವೇಶನ ನಡೆಯುವ ಕುರಿತು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಸತ್ ಚಳಿಗಾಲದ ಅಧಿವೇಶನ ತುಸು ವಿಳಂಬವಾಗಿದ್ದಕ್ಕೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ಹಲವರು ಸುಖಾಸುಮ್ಮನೆ ಮೋದಿ ಅವರನ್ನು ಟೀಕಿಸಿದ್ದರು.
Leave A Reply