• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಉಡುಪಿ ಶ್ರೀಕೃಷ್ಣಮಠದಲ್ಲಿ ಇಫ್ತಾರ್ ಕೂಟದಿಂದ ಶ್ರೀಗಳಿಗೆ ಏನು ಲಾಭವಿತ್ತು. ಈ ಅಂಕಣ ಓದಿ

TNN Correspondent Posted On July 3, 2017
0


0
Shares
  • Share On Facebook
  • Tweet It

ಉಡುಪಿ ಶ್ರೀಕೃಷ್ಣಮಠದಲ್ಲಿ ಇಫ್ತಾರ್ ಕೂಟ ಆಚರಿಸಲ್ಪಟ್ಟ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಇಫ್ತಾರ್ ಕೂಟದಿಂದ ಶ್ರೀಗಳಿಗೆ ಏನು ಲಾಭವಿತ್ತು.

ಹಿಂದೂ ಧರ್ಮದ ಏಳಿಗೆಗೆ ಜೀವನವೀಡಿ ಶ್ರಮಿಸಿದ ಯತಿಯೊಬ್ಬರ ಒಂದೇ ಫೋನ್ ಕರೆಗೆ ಮುಸಲ್ಮಾನರು ಓಡೋಡಿ ಬಂದರಲ್ಲ, ಅದು ಪೇಜಾವರ ಶ್ರೀಗಳ ತಾಕತ್ತು!

ಪೇಜಾವರ ವಿಶ್ವೇಶ ತೀರ್ಥರನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಯಾಕೆಂದರೆ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವ ಬೇರೆ ಯಾರಿಗಾದರೂ ಅದರ ಹಿಂದೆ ಒಂದು ಸ್ವಾರ್ಥ ಇರುತ್ತದೆ. ಮುಸಲ್ಮಾನರ ಉಪವಾಸದ ತಿಂಗಳು ಬಂದಾಗ ಅವರಿಗಿಂತ ಹೆಚ್ಚು ಖುಷಿ ಪಡುವವರು ಕಾಂಗ್ರೆಸ್ಸಿಗರು. ಯಾಕೆಂದರೆ ಅವರಿಗೆ ಮುಸ್ಲಿಮರನ್ನು ಒಲೈಸಲು ಮೂವತ್ತು ದಿನ ಎಕ್ಸಟ್ರಾ ಸಿಕ್ಕಿರುತ್ತದೆ. ಕಾಂಗ್ರೆಸ್ಸಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ರಾಷ್ಟ್ರದ ಉನ್ನತ ನಾಯಕರ ತನಕ ಅವರು ತಮ್ಮ ಮನೆಯವರ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೋ ಇಲ್ಲವೋ ಇಫ್ತಾರ್ ಕೂಟವನ್ನು ಖಂಡಿತ ಆಚರಿಸುತ್ತಾರೆ. ಅದರಿಂದ ತಾವು ಮುಸಲ್ಮಾನರ ರಕ್ಷಕರು ಎನ್ನುವ ಭಾವನೆ ಬರುವಂತೆ ಮಾಡುತ್ತಾರೆ. ಕೆಲವರಂತೂ ಮುಸ್ಲಿಮರೇ ನಾಚುವಂತೆ ಅವರ ಕಪ್ಪು, ಬಿಳಿ ಟೋಪಿ ಧರಿಸಿ ಫೋಟೋಗೆ ವಿಚಿತ್ರವಾಗಿ ಫೋಸ್ ಕೊಡುತ್ತಾರೆ. ಅಲ್ಲಿಗೆ ತಿಂಗಳೀಡಿ ಮುಸಲ್ಮಾನರು ಉಪವಾಸ ಕುಳಿತದ್ದನ್ನು ಕೆಲವು ಜಾತ್ಯಾತೀತ ಪಕ್ಷಗಳು ತಮ್ಮ ಲಾಭಕ್ಕೆ ಬಳಸಿ ಅಲ್ಲಿ ನಾಯಕರು ಭಾಷಣ ಮಾಡುವುದಕ್ಕೆ ಸೀಮಿತವಾಗುತ್ತವೆ. ಒಂದು ವೇಳೆ ಬಿಜೆಪಿ ಮುಖಂಡರು ಕೂಡ ಇಫ್ತಾರ್ ಕೂಟ ಆಚರಿಸಿ ಮುಸ್ಲಿಮರ ಒಲೈಕೆಗೆ ಕೇಸರಿ ಶಾಲು ಹಾಕಿ ನಿಂತರೆ ಅದನ್ನು ಕೂಡ ಓಲೈಕೆ ಎಂದೇ ಹೇಳಬೇಕು. ಆದರೆ ನೆನಪಿಡಿ, ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥರಿಗೆ ಇದರ ಯಾವ ಅಗತ್ಯವೂ ಇಲ್ಲ.
ಅವರು ಅಕ್ಷರಶ: ತಮ್ಮ ಬದುಕಿನ ಉನ್ನತ ಶಿಖರದಲ್ಲಿ ಇದ್ದಾರೆ. ಅವರು ಅಷ್ಟಯತಿಗಳ ಪರಂಪರೆಯಲ್ಲಿಯೇ ಐದನೇ ಬಾರಿ ಪರ್ಯಾಯ ಪೀಠವನ್ನು ಏರುವ ಮೂಲಕ ಜೀವನದಲ್ಲಿ ಯತಿಯೊಬ್ಬರು ಮುಟ್ಟಬಹುದಾದ ತುತ್ತ ತುದಿಯಲ್ಲಿದ್ದಾರೆ. ಪೇಜಾವರ ಹಿರಿಯ ಶ್ರೀಗಳಿಗೆ ಇಫ್ತಾರ್ ಕೂಟದಿಂದ ಆಗಬೇಕಾಗಿರುವಂತದ್ದು ಏನೂ ಇಲ್ಲ. ಅವರಿಗೆ ನಾಲ್ಕು ಜನ ಮುಸಲ್ಮಾನರು ಬಂದು ಊಟ ಮಾಡಿ ಹೋದರೆ ಖರ್ಚು ವಿನ: ನಯಾ ಪೈಸೆಯ ಲಾಭ ಇಲ್ಲ. ಇವರು ಇಫ್ತಾರ್ ಕೂಟ ಮಾಡಿಸಿದ ಕಾರಣ ಬಿಜೆಪಿಗೂ ಒಂದು ವೋಟು ಆದರೂ ಹೆಚ್ಚು ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ. ಆದರೂ ಶ್ರೀಗಳು ಇದನ್ನು ಮಾಡಿದ್ದಾರೆ ಎಂದರೆ ಅವರಲ್ಲಿ ಅದೇನೋ ಬದಲಾವಣೆಗೆ ತಾನು ನಾಂದಿ ಹಾಡುತ್ತಿದ್ದೇವೆ ಎನ್ನುವ ಅಚಲ ವಿಶ್ವಾಸ ಮಾತ್ರ. ಪೇಜಾವರ ಶ್ರೀಗಳಿಗೆ ತಮ್ಮ ಪರ್ಯಾಯವನ್ನು ಎಲ್ಲಾ ವಿಧದಲ್ಲಿಯೂ ವಿಶೇಷ ಮಾಡಬೇಕೆನ್ನುವ ಅದಮ್ಯ ಗುರಿ ಇರಬಹುದು. ಅದಕ್ಕಾಗಿ ಅವರು ಸಮಾಜ ಸುಧಾರಣೆಯ ಹತ್ತು ಹಲವು ದಾರಿಗಳನ್ನು ಹುಡುಕುತ್ತಾರೆ ವಿನ: ಅದರಲ್ಲಿ ಯಾವ ಸ್ವಾರ್ಥವೂ ಇಲ್ಲ. ಅಷ್ಟಕ್ಕೂ ಇಫ್ತಾರ್ ಕೂಟ ಮಾಡಿ ಎಂದು ಸ್ವಾಮೀಜಿಗಳಿಗೆ ಮೇಲಿನಿಂದ ಸೂಚನೆ ಬಂದಿದೆ ಎಂದು ಮೂದಲಿಸುವವರು ಇದ್ದಾರೆ. ಸ್ವಾಮಿಗಳಿಗೆ ಸೂಚನೆ ಕೊಡುವವರು ಬಹುಶ: ಭಗವಂತ ಕೃಷ್ಣ ಅಥವಾ ಮುಖ್ಯಪ್ರಾಣ ಒಬ್ಬನೇ. ಅವನನ್ನು ಬಿಟ್ಟರೆ ಬೇರೆ ಯಾರೂ ಕೊಟ್ಟರೂ ಯೋಚಿಸಲು ಸಮಯ ಬೇಕು ಎಂದು ಹೇಳುವಷ್ಟು ನೈತಿಕತೆ ಅಷ್ಟಮಠದ ಯತಿಗಳಲ್ಲಿ ಪೇಜಾವರರಿಗೆ ಇದ್ದೇ ಇದೆ.
ಇನ್ನು ಗೋಭಕ್ಷಕರನ್ನು ಒಳಗೆ ಬಿಟ್ಟು ದೇವಳದ ಪ್ರಾವಿತ್ರತೆಯನ್ನು ಹಾಳು ಮಾಡಿದ್ದಾರೆ ಸ್ವಾಮಿಗಳು ಎಂದು ಹೇಳುತ್ತಿರುವುದು ಶ್ರೀರಾಮಸೇನೆ ಮತ್ತು ಹಿಂದೂ ಜನ ಜಾಗೃತಿ ಸಮಿತಿ. ಗೋವನ್ನು ತಿನ್ನುವುದು ಮಹಾಪಾಪ. ಹಾಗಿರುವಾಗ ಅದನ್ನು ಯಾರೇ ಮಾಡಿದರೂ ಅದನ್ನು ವಿರೋಧಿಸಬೇಕು. ಈ ಇಫ್ತಾರ್ ಕೂಟ ಮಾಡುವುದಕ್ಕೆ ಮೊದಲು ಕೃಷ್ಣ ಮಠಕ್ಕೆ ಅದೆಷ್ಟೊ ವಿಐಪಿಗಳು ಬಂದರಲ್ಲ, ಯಾವುದ್ಯಾವುದೋ ರಾಜ್ಯದ ಮುಖ್ಯಮಂತ್ರಿಗಳು ಬಂದರಲ್ಲ, ರಾಜ್ಯಪಾಲರು ಬಂದರಲ್ಲ, ಸಚಿವ ಮಹಾಶಯರು ಬಂದರಲ್ಲ, ದೇಶದ ರಾಷ್ಟ್ರಪತಿಗಳೇ ಬಂದರಲ್ಲ, ಇಷ್ಟು ವಿಐಪಿಗಳೊಡನೆ ಅವರ ಪಟಾಲಂ ಬಂದಿತ್ತಲ್ಲ, ನಮ್ಮ ರಾಜ್ಯದ ಮಾಜಿ, ಹಾಲಿ ಉನ್ನತ ಅಧಿಕಾರಿಗಳು ಬಂದರಲ್ಲ. ಅವರೆಲ್ಲ ಬರುವಾಗ ಇದೇ ಸಂಘಟನೆಯವರು “ನಿಮ್ಮ ಮೆನು ನೋಡಬೇಕು, ನೀವು ಗೋಭಕ್ಷಣೆ ಮಾಡಿಲ್ಲ ಎಂದರೆ ಮಾತ್ರ ಒಳಗೆ ಬಿಡುತ್ತೇವೆ” ಎಂದು ಹೇಳಿದ್ರಾ? ಇಲ್ವಾಲ್ಲ. ಒಂದು ವಿಷಯ ಓಕೆ. ಕಾಶ್ಮೀರದಲ್ಲಿ ಮತಾಂಧ ಯುವಕರು ನಮ್ಮ ಯೋಧರನ್ನು, ಪೊಲೀಸರನ್ನು ಕಲ್ಲು ಹೊಡೆದು ಸಾಯಿಸುತ್ತಿದ್ದಾರೆ, ಹಾಗಿರುವಾಗ ಅವರದ್ದೇ ಧರ್ಮದವರನ್ನು ನಾವು ಸತ್ಕಾರ ಮಾಡುವುದು ಸರಿಯಾ ಎಂದು ಕೆಲವರು ಕೇಳಬಹುದು. ಅದಕ್ಕೆ ನಾನು ಹೇಳುವುದು- ನಮಗೆ ಕಲ್ಲು ಹೊಡೆಯುವವರನ್ನೇ ನಾವು ಸಹಿಸಿಕೊಂಡಿದ್ದೇವೆ. ಅವರೊಂದಿಗೆ ಗುಪ್ತವಾಗಿ ಮಾತನಾಡಿ ಚಾ ಕುಡಿದು ಬರುವ ಜಾತ್ಯಾತೀತವಾದಿ ರಾಜಕಾರಣಿಗಳಿಗೆ ದೆಹಲಿಯಲ್ಲಿ ಬಂಗ್ಲೆ, ಗನ್ ಮ್ಯಾನ್ ಕೊಟ್ಟಿದ್ದೇವೆ. ಹಾಗಿರುವಾಗ ಬನ್ನಿ, ನಮ್ಮ ಕೃಷ್ಣನ ಸ್ವಂತ ಜಾಗದಲ್ಲಿ ಅವನಿಗೆ ಮಂಡಿಯೂರಿ ಅಡ್ಡಬೀಳಿ ಎಂದು ಕರೆದ ತಕ್ಷಣ ಓಡೋಡಿ ಬಂದು ಸೈ ಎಂದರಲ್ಲ, ಆ ನಿಟ್ಟಿನಲ್ಲಾದರೂ ಪೇಜಾವರ ಶ್ರೀಗಳು ಮಾಡಿದ್ದು ಕಡಿಮೆ ಸಾಧನೆನಾ?
ನಮಗೆ ಹಿಂದೂ ಸ್ವಾಮಿಗಳಿಂದ ಉಪವಾಸ ಬಿಡಿಸಿಕೊಳ್ಳುವಷ್ಟು ದುರ್ಗತಿ ಬಂದಿಲ್ಲ ಎಂದು ಯಾವೊಬ್ಬ ಮುಸಲ್ಮಾನನೂ ಕರೆದಾಗಲೂ ಬರುವುದಿಲ್ಲ ಎಂದಿಲ್ಲವಲ್ಲ. ಅಷ್ಟಕ್ಕೂ ಬಂದವರು ಊಟಕ್ಕೆ ಇಲ್ಲದೆ ಬಂದವರಲ್ಲ. ಹಾಗಿದ್ದೂ ಹಿಂದೂ ಧರ್ಮದ ರಕ್ಷಣೆಗೆ ಟೊಂಕ ಕಟ್ಟಿ ನಿಂತ ವಿಶ್ವ ಹಿಂದೂ ಪರಿಷತ್ ನ ಸ್ಥಾಪಕರೊಬ್ಬರ ಒಂದೇ ಫೋನ್ ಕರೆಗೆ ಎದ್ದು ಬಿದ್ದು ಬಂದು ಸರದಿಯಲ್ಲಿ ಕುಳಿತು ಸ್ವಾಮೀಜಿಗಳು ಬಂದಾಗ ಎದ್ದು ನಿಂತರಲ್ಲ, ಅದು ಒಬ್ಬ ಯತಿ ಗಳಿಸಿದ ತಾಕತ್ತು. ಪೇಜಾವರ ಶ್ರೀಗಳೇ ನಿಮಗೆ ಕೋಟಿ ನಮನ

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search