ಮಂದಿರವಲ್ಲೇ ಕಟ್ಟುವೆವು, ಮಂದಿರವಷ್ಟನ್ನೇ ಕಟ್ಟುವೆವು ಎಂದ ಮೋಹನ್ ಭಾಗವತ್
ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ಹೊರತಾಗಿ ಬೇರೆ ಯಾವ ಕಟ್ಟಡವೂ ನಿರ್ಮಾಣವಾಗುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಶತಃಸಿದ್ಧ. ಮಂದಿರದ ಮೇಲೆ ಶೀಘ್ರದಲ್ಲೇ ಭಾಗವಾಧ್ವಜ ಹಾರಾಡುತ್ತದೆ. ಆ ಬಗ್ಗೆ ಹಿಂದೂಗಳಿಗೆ ಯಾವುದೇ ಸಂಶಯ ಬೇಡ ಎಂದಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಕೃಷ್ಣನ ಆಶೀರ್ವಾದ ಇದ್ದು, 2019ರೊಳಗೆ ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಅಲ್ಲದೆ ಕೇಂದ್ರ ಸರ್ಕಾರ ಗೋಹತ್ಯೆ ನಿಷೇಧಿಸಬೇಕು. ಪರ್ಯಾಯದ ನಂತರ ನಾನು ದೈಹಿಕ ಹಾಗೂ ಮಾನಸಿಕವಾಗಿ ಹೋರಾಟಕ್ಕೆ ಇಳಿಯುತ್ತೇನೆ ಎಂದು ಘೋಷಿಸಿದ್ದಾರೆ.
ಇನ್ನು ಸರ್ಕಾರಗಳು ಬರೀ ಹಿಂದೂ ದೇವಾಲಯಗಳ ಉಸ್ತುವಾರಿಯನ್ನೇಕೆ ನೋಡಿಕೊಳ್ಳಬೇಕು? ಹೀಗೆಯೇ ಮಸೀದಿ, ಚರ್ಚ್ ಗಳನ್ನು ನಿರ್ವಹಣೆ ಮಾಡಲಿ ನೋಡೋಣ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಧರ್ಮ ಸಂಸದ್ ನ ಪ್ರತಿ ಮೂಲೆಯಲ್ಲೂ ಹಿಂದುತ್ವದ ಝೇಂಕಾರವೇ ಮೊಳಗಿದ್ದು, ರಾಮಮಂದಿರ ನಿರ್ಮಾಣಕ್ಕೆ ಒಕ್ಕೊರಲಿನ ಧ್ವನಿ ಎದ್ದಿದೆ.
Leave A Reply