ಪದ್ಮಾವತಿ ಚಿತ್ರ ವಿರೋಧಿಸಿದ್ದಕ್ಕಾಗಿ ಮುಸ್ಲಿಮರೇ ಹಿಂದೂ ವ್ಯಕ್ತಿಯನ್ನು ಕೊಂದರೆ?
Posted On November 25, 2017
0
ಜೈಪುರ: ಜೈಪುರದ ನಾಹಾಗಡ ಕೋಟೆಯಲ್ಲಿ ಚೇತನ್ ಕುಮಾರ್ ಸೈನಿ (40) ಎಂಬುವವರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲದೆ ಕೋಟೆಯ ಕಲ್ಲುಗಳ ಮೇಲೆ ಕೆತ್ತಿರುವ ಹಲವು ವಾಕ್ಯಗಳು, ಪದ್ಮಾವತಿ ಚಿತ್ರವನ್ನು ವಿರೋಧಿಸಿದ್ದಕ್ಕಾಗಿ ಮುಸ್ಲಿಮರೇ ಹಿಂದೂ ವ್ಯಕ್ತಿಯನ್ನು ಕೊಂದರಾ ಎಂಬ ಪ್ರಶ್ನೆ ಕಾಡುವಂತಾಗಿದೆ.
ಹೌದು, ಕೋಟೆಯಲ್ಲಿ ಕಲ್ಲಿನ ಮೇಲೆ ಕೆತ್ತಿರುವ ಹಲವು ವಾಕ್ಯಗಳು ಇಂಥಾದ್ದೊಂದು ಅನುಮಾನ ಹುಟ್ಟುವಂತೆ ಮಾಡಿದೆ.
ಪದ್ಮಾವತಿ ಚಿತ್ರ ವಿರೋಧಿಸಿದರೆ ಅವರ ತಲೆ ಕಡಿಯಲ್ಲ, ಹೀಗೆ ನೇಣು ಬಿಗಿಯುತ್ತೇವೆ.
ನಾವು ಅಲ್ಲಾನ ಹುಡುಗರು ಹಾಗೂ ನಾವು ತುಂಬ ಬಲಿಷ್ಠರಿದ್ದೇವೆ
ನಾವು ಕಾಫೀರರನ್ನು ಕೊಂದರೆ, ನಮಗೆ ಅಲ್ಲಾ ತೀರಾ ಹತ್ತಿರವಾಗುತ್ತಾನೆ
ಹೀಗೆ ಕಲ್ಲಿನ ಮೇಲೆ ಕೆತ್ತಲಾಗಿರುವ ಅಂಶಗಳು ಮುಸ್ಲಿಮರೇ ಹಿಂದೂ ವ್ಯಕ್ತಿಯನ್ನು ಕೊಂದು ಗಲಭೆ ಸೃಷ್ಟಿಸಲು ಹೊರಟಿದ್ದಾರೆ ಅಥವಾ ಮುಸ್ಲಿಮರ ವಿರುದ್ಧ ಹಿಂದೂಗಳು ಹೋರಾಡಲು ಈ ರೀತಿ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಇದು ಕೊಲೆ ಎಂಬ ದಿಸೆಯಲ್ಲಿ ತನಿಖೆ ಸಹ ನಡೆಸುತ್ತಿದ್ದಾರೆ.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









