ಶಿಯಾ ಮುಸ್ಲಿಮರೇಕೆ ಬೆಂಗಳೂರಿನಲ್ಲಿರುವ ಇಂಡಿಯಾ ಟುಡೇ ಕಚೇರಿಗೆ ದಾಳಿ ಮಾಡಿದ್ದು ಗೊತ್ತಾ?
ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನೂರಾರು ಶಿಯಾ ಮುಸ್ಲಿಮರು ಬೆಂಗಳೂರಿನಲ್ಲಿರುವ ಇಂಡಿಯಾ ಕಚೇರಿಗೆ ದಾಳಿ ಮಾಡಿದ್ದು, ಬಂದ್ ಕರೋ, ಬಂದ್ ಕರೋ, ಆಜ್ ತಕ್ ಬಂದ್ ಕರೋ ಎಂದು ಘೋಷಣೆ ಕೂಗಿದ್ದಾರೆ.
ಹೌದು, ಅಂಜುಮಾನ್ ಇ ಇಮಾನಿಯಾ ಎಂಬ ಶಿಯಾ ಮುಸ್ಲಿಂ ಸಂಘಟನೆ ಕಾರ್ಯಕರ್ತರು ಕಚೇರಿ ಎದುರು ನಿಂತು ಗಲಾಟೆ ಮಾಡಿದ್ದಲ್ಲದೆ, ಮಾಧ್ಯಮ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಟುಡೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೋಹಿತ್ ಸರ್ದಾನಾ ಎಂಬಾತ, ಸೆಕ್ಸಿ ದುರ್ಗಾದ ಸಿನಿಮಾ ಕುರಿತು ಉಲ್ಲೇಖಿಸುತ್ತ, ಯಾವಾಗಲೂ ಹಿಂದೂ ದೇವತೆಗಳೇಕೆ ಟಾರ್ಗೆಟ್ ಆಗುತ್ತಾರೆ? ಬೀಬಿ ಫಾತಿಮಾ ಏಕೆ ಟಾರ್ಗೆಟ್ ಆಗುವುದಿಲ್ಲ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು.
ಇದನ್ನು ಖಂಡಿಸಿದ್ದ ಶಿಯಾ ಮುಸ್ಲಿಮರು ನ.23ರಂದು ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಸರ್ದಾನಾ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಕೊನೆಗೆ ಸರ್ದಾನಾ ಟ್ವಿಟರ್ ನಲ್ಲೇ ಕ್ಷಮೆಯಾಚಿಸಿದ್ದರು. ಆದರೂ ಸುಮ್ಮನಿರದ ಶಿಯಾ ಮುಸ್ಲಿಮರು ಇಂಡಿಯಾ ಟುಡೇ ಕಚೇರಿಗೇ ದಾಳಿ ಮಾಡಿದ್ದಾರೆ.
Leave A Reply