2018ರ ವೇಳೆಗೆ ಜಾರ್ಖಂಡ್ ನಲ್ಲಿ ನಕ್ಸಲಿಸಂನ ಲವಲೇಶವೂ ಇರಲ್ಲ: ರಘುಬರ್ ದಾಸ್
Posted On November 26, 2017
ರಾಂಚಿ: ಮುಂದಿನ ವರ್ಷದೊಳಗೆ ಜಾರ್ಖಂಡ್ ಅನ್ನು ನಕ್ಸಲಿಸಂ ಮುಕ್ತ ರಾಜ್ಯವನ್ನಾಗಿಸುತ್ತೇವೆ ಎಂದು ಮುಖ್ಯಮಂತ್ರಿ ರಘುಬರ್ ದಾಸ್ ಘೋಷಿಸಿದ್ದಾರೆ.
ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯ ಕಾಂಕ್ಲೇವ್ ಈಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ರಾಜ್ಯವೂ ಶಾಂತಿಯಿಂದ ಇರಬೇಕು. ಸರ್ಕಾರವೂ ಅದೇ ದಿಸೆಯಲ್ಲಿ ಕೆಲಸ ಮಾಡಬೇಕು ಎಂದಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಜಾರ್ಖಂಡ್ ನಲ್ಲಿ ಶೇ.70ರಷ್ಟು ನಕ್ಸಲಿಸಂ ಕೊನೆಗಾಣಿಸಿದ್ದೇವೆ. ಇನ್ನುಳಿದ ಶೇ.30ರಷ್ಟನ್ನು 2018ರೊಳಗೆ ನಿರ್ನಾಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದುವರೆಗೂ ನಕ್ಸಲಿಸಂ ಕೊನೆಗಾಣಿಸಿದರೂ, ಕೆಲವು ಮುಖಂಡರು ಬಾಕಿ ಉಳಿದಿದ್ದಾರೆ. ಅವರೆಲ್ಲರನ್ನೂ ನಮ್ಮ ಪೊಲೀಸರು ಹೊಡೆದುರುಳಿಸಲಿದ್ದು, 2018ರ ಡಿಸೆಂಬರ್ ಒಳಗೆ ರಾಜ್ಯ ನಕ್ಸಲಿಸಂ ಮುಕ್ತವಾಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿರುವ ರಘುಬರ್ ದಾಸ್, ಗುಜರಾತಿನಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Advertisement -
Leave A Reply