ಅಷ್ಟಕ್ಕೂ ಕಾಶ್ಮೀರ್ ಕ್ಯಾ ತುಮಾರಾ ಬಾಪ್ ಕಾ ಜಾಗೀರ್ ಹೈ ಎಂದಿದ್ದು ಯಾರು? ವೀಡಿಯೋ ನೋಡಿ!
ಎಂಥ ವಿಚಿತ್ರ ನೋಡಿ. ಭಾರತದಲ್ಲಿದ್ದು, ಭಾರತದ ಅನ್ನ ತಿಂದು, ಇಲ್ಲಿನ ರಾಜಕೀಯದ ಪಡಸಾಲೆಯಲ್ಲೇ ಹೊರಳಾಡುವ ಫಾರೂಕ್ ಅಬ್ದುಲ್ಲಾಗೆ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದಾಗಿ ಕಾಣುತ್ತದೆ.
ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ, ಪಾಕಿಸ್ತಾನದಿಂದ ಬೇಸತ್ತಿರುವ ಮುಸ್ಲಿಮರಿಗೆ ಮಾತ್ರ ಇಡೀ ಕಾಶ್ಮೀರ ಭಾರತದ್ದಾಗಿ ಕಾಣುತ್ತದೆ.
ಪಾಕಿಸ್ತಾನದ ವಿರುದ್ಧ ಅಧಿಕೃತವಾಗಿಯೇ ಅಲ್ಲಿನ ನಾಯಕ ತೌಕೀರ್ ಗೀಲಾನಿ ಮಾತನಾಡಿದ್ದು, ಕಾಶ್ಮೀರ್ ನಿಮ್ಮ ಪಿತ್ರಾರ್ಜಿತ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕಾಶ್ಮೀರ ಪಾಕಿಸ್ತಾನದ್ದು ಎಂದು ಎಲ್ಲಿ ಉಲ್ಲೇಖಿಸಲಾಗಿದೆ? ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಸಹ ಪಾಕಿಸ್ತಾನದ್ದು ಎಂದು ಇಸ್ಲಾಮಾಬಾದ್ ಹೇಳಿಕೆ ನೀಡಿರುವುದು ಬರೀ ಸುಳ್ಳು. ಮುಸ್ಲಿಂ ಕಾನ್ಫರೆನ್ಸ್ ಇದುವರೆಗೂ ಸುಳ್ಳಿನ ಕಂತೆ ಸುತ್ತುತ್ತಲೇ ಬರುತ್ತಿದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದಲ್ಲ ಎಂದಿದ್ದಾರೆ.
ಪಾಕಿಸ್ತಾನಿಗಳು ನಮ್ಮನ್ನು ದ್ರೋಹಿಗಳೆಂದು ಕರೆಯುತ್ತಾರೆ. ಆದರೆ ನಾವು ಪಾಕಿಸ್ತಾನದ ಕೆ.ಜಿ. ಉಪ್ಪಿಗೆ 20 ರೂಪಾಯಿ ಕೊಡಬೇಕಾಗಿದೆ. ಪಾಕಿಸ್ತಾನ ನಮ್ಮ ನೀರನ್ನೇ ಕುಡಿಯುತ್ತಿದೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.
ಆದಾಗ್ಯೂ, ಇತ್ತೀಚೆಗೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದು ಎಂದು ಹೇಳಿಕೆ ನೀಡಿ ಛೀಮಾರಿ ಹಾಕಿಸಿಕೊಂಡಿದ್ದರು. ಗೀಲಾನಿ ಅಂಥವರ ಮಾತಿನಿಂದಾದರೂ ಫಾರೂಕ್ ಗೆ ಬುದ್ಧಿ ಬರಲಿ.
-ವಿಡಿಯೋ ಕೃಪೆ: ಎಎನ್ಐ ನ್ಯೂಸ್
Leave A Reply