ಬೇರೆ ಚಟ್ನಿ ಯಾಕೆ, ಶುಂಠಿ ಚಟ್ನಿ ಮಾಡಿ!
			      		
			      		
			      			Posted On July 4, 2017			      		
				  	
				  	
							0
						
						
										  	 
			    	    ಶುಂಠಿ ಚಟ್ನಿ
ಬೇಕಾಗುವ ಪದಾರ್ಥಗಳು:
1/2 ತೆಂಗಿನ ಕಾಯಿ
3 ಹಸಿ ಮೆಣಸು
ಒಂದು ಸಣ್ಣ ಹಸಿ ಶುಂಠಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಹುಣಸೆ ಹಣ್ಣು
ಒಗ್ಗರಣೆಗೆ ಸ್ವಲ್ಪ ಸಾಸಿವೆ ಎಣ್ಣೆ
ಮಾಡುವ ವಿಧಾನ:
ತೆಂಗಿನ ಹುರಿ, ಹಸಿ ಮೆಣಸು, ಶುಂಠಿ, ಹುಣಸೆ ಹಣ್ಣು, ಚೂರು ಉಪ್ಪು ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಹದವಾಗಿ ರುಬ್ಬಿದ ನಂತರ ಕಾವಲಿಯಲ್ಲಿ ಸಾಸಿವೆ ಮತ್ತು ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆ ಚಟ್ನಿಗೆ ಹಾಕಿ ಬೆರೆಸಿದರೆ ಆರೋಗ್ಯಕ್ಕೂ ಚೆನ್ನಾಗಿರುವ ಶುಂಠಿ ಚಟ್ನಿ ರೆಡಿ.
 
		    				         
								     
								    








