ಹಾರ್ದಿಕ್ ಪಟೇಲ್ ಪಟೇಲರಿಗೆ ಮೀಸಲಾತಿ ಎನ್ನುತ್ತಿದ್ದಾರೆ, ಅತ್ತ ಎನ್ಆರ್ ಐ ಪಟೇಲರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ!

ಗಾಂಧಿನಗರ: ಗುಜರಾತಿನಲ್ಲಿ ಪಟೇಲರಿಗೆ ಮೀಸಲಾತಿ ನೀಡಬೇಕು ಎಂದು ಹೋರಾಡುತ್ತಲೇ, ಅದೇ ಹೋರಾಟವನ್ನು ರಾಜಕೀಯದ ಏಣಿಯಾಗಿ ಬಳಸುತ್ತಿರುವ ಹಾರ್ದಿಕ್ ಪಟೇಲ್ ಕಾಂಗ್ರೆಸ್ಸಿನೊಂದಿಗೂ ಕೈ ಜೋಡಿಸುವ ಮಾತನಾಡಿ, ರಾಜಕಾರಣಿಯಾಗಲು ಹೊರಟ್ಟಿದ್ದರೆ, ಅತ್ತ ವಿದೇಶಗಳಲ್ಲಿರುವ ಎನ್ಆರ್ ಐ ಪಟೇಲರು ಗುಜರಾತಿಗೆ ಬಂದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಕಂಡಿರುವ ಹಾರ್ದಿಕ್ ಪಟೇಲ್ ದಿಗ್ಭ್ರಾಂತರಾಗಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಜಗತ್ತು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗಿದೆ. ನಾವು ಬಿಜೆಪಿಯ ಗೆಳೆಯರು ಹಾಗೂ ಮೋದಿ ಅವರ ಅಭಿಮಾನಿಗಳು. ಹಾಗಾಗಿಯೇ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೇವೆ ಎಂದು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ, ಉದ್ಯಮಿ ಬಾಬು ಭಾಯಿ ಲಾಲ್ ಪಟೇಲ್ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಆಸ್ಟ್ರೇಲಿಯಾ, ಲಂಡನ್, ಅಮೆರಿಕದಲ್ಲಿರುವ ಗುಜರಾತಿನ 150ಕ್ಕೂ ಅಧಿಕ ಅನಿವಾಸಿಗಳು ಗುಜರಾತಿನಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಆಗಮಿಸಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ.
ಹಾರ್ದಿಕ್ ಪಟೇಲ್ ಇತಿಹಾಸವನ್ನೇ ಅರಿಯದ ಯುವಕ. ಆತನಿಗೊಂದು ಸಿದ್ಧಾಂತವೇ ಇಲ್ಲ. ಹಾಗಾಗಿಯೇ ಪಟೇಲರು ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹಾರ್ದಿಕ್ ಪಟೇಲ್ ಗೇ ಟಾಂಗ್ ನೀಡಿದ್ದಾರೆ.
ಒಟ್ಟಿನಲ್ಲಿ ಗುಜರಾತ್ ಚುನಾವಣೆ ಮೋದಿ ವರ್ಚಸ್ಸು ಹಾಗೂ ಅಭಿವೃದ್ಧಿಯ ಆಧಾರದಲ್ಲಿ ನಡೆಯುತ್ತಿದ್ದು, ಪಟೇಲ್ ಸಮುದಾಯದ ವ್ಯಕ್ತಿಯೇ ರಾಜಕೀಯಕ್ಕೆ ಧುಮುಕುತ್ತಿದ್ದರೂ, ಬಿಜೆಪಿ ಅಭಿವೃದ್ಧಿ ಮೆಚ್ಚಿ ವಿದೇಶದಲ್ಲಿರುವ ಎನ್ಆರ್ ಐ ಪಟೇಲರು ಕಮಲದ ಪರ ಪ್ರಚಾರ ನಡೆಸುತ್ತಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ಸದ್ಯ, ಗುಜರಾತಿನಲ್ಲಿ ಹಾರ್ದಿಕ್ ಪಟೇಲರನ್ನು ಯಾರು ಬೆಂಬಲಿಸುತ್ತಾರೆ ಎಂಬುದೇ ಪ್ರಶ್ನೆಯಾಗಿದೆ.
Leave A Reply