ಇನ್ನು ಮುಂದೆ ಯಾರೂ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇದೆ ಎನ್ನುವಂತಿಲ್ಲ!
ಉಡುಪಿ: ಇಸ್ಲಾಂ, ಕ್ರಿಶ್ಚಿಯನ್ ಸೇರಿ ಹಲವು ಧರ್ಮಗಳಲ್ಲಿರುವ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ ಬಿಟ್ಟು, ಬರೀ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇದೆ ಎಂದು ಬಾಯಿ ಬಡಿದುಕೊಳ್ಳುವವರು, ಇನ್ನು ಮುಂದೆ ಹಾಗೆ ಹೇಳುವಂತಿಲ್ಲ.
ಏಕೆಂದರೆ…
ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ನಲ್ಲಿ ಆಯೋಜಿಸಿದ್ದ, “ಸಾಮಾಜಿಕ ಸಾಮರಸ್ಯ ನಿರ್ಮಾಣಕ್ಕೆ ಮಾಡಬೇಕಾದ ಪ್ರಯತ್ನಗಳು” ಎಂಬ ಗೋಷ್ಠಿಯಲ್ಲಿ ಹಿಂದೂ ಧರ್ಮದಲ್ಲಿರುವ ಎಲ್ಲ ಜಾತಿಯ ಜನರಿಗೆ ದೇವಾಲಯ ಹಾಗೂ ಮನೆಗಳಲ್ಲಿ ಮುಕ್ತ ಅವಕಾಶ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಅಸ್ಪೃಶ್ಯತೆ ನಿವಾರಣೆಗೆ ಎಲ್ಲ ದೇಗುಲಗಳಲ್ಲಿ ಹಿಂದೂ ಧರ್ಮದವರೆಲ್ಲರಿಗೂ ಅವಕಾಶವಿದ್ದು, ಆಯಾ ಧರ್ಮಪೀಠಗಳ ಮುಖ್ಯಸ್ಥರು ಇದರ ನೇತೃತ್ವ ವಹಿಸಿಕೊಳ್ಳಬೇಕು. ಮನೆಗಳಲ್ಲೂ ಅವಕಾಶ ನೀಡಬೇಕು. ಸಮಸ್ತ ಹಿಂದೂಗಳಿಗೂ ಒಂದೇ ಸ್ಮಶಾನ ಇರಬೇಕು, ಬೇರೆ ಜಾತಿಯವರು ಪರಿಶಿಷ್ಟ ಜಾತಿಯ ಕುಟುಂಬ ದತ್ತು ಪಡೆದು ಅಭಿವೃದ್ಧಿಗೆ ಶ್ರಮಿಸಬೇಕು, ಸಾಧು-ಸಂತರು ಪರಿಶಿಷ್ಟ ಜಾತಿಯವರ ಪ್ರದೇಶಗಳಲ್ಲಿ ಸಂಚರಿಸಿ ಅವರಿಗೆ ಆತ್ಮಸ್ಥೈರ್ಯ ನೀಡಬೇಕು, ಪರಿಶಿಷ್ಟ ಜಾತಿಯವರಿಗೂ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಅವಕಾಶ ನೀಡಬೇಕು ಸೇರಿ ಹಲವು ನಿರ್ಣಯಗಳನ್ನು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಪ್ರಕಟಿಸಿದರು.
ಅಲ್ಲದೆ ಭಾರತದಲ್ಲಿ ಹುಟ್ಟಿದ ಧರ್ಮಗಳೆಲ್ಲವೂ ಹಿಂದೂ ಧರ್ಮದ ಭಾಗವೇ ಆಗಿವೆ. ಆಮಿಷಕ್ಕೆ ಒಳಗಾಗಿ ಮತಾಂತರ ಹೊಂದಿರುವ ಹಿಂದೂಗಳನ್ನು “ಘರ್ ವಾಪಸಿ” ಮೂಲಕ ಮಾತೃಧರ್ಮಕ್ಕೆ ಕರೆತರುವ ಪ್ರಯತ್ನ ಮಾಡಬೇಕು ಎಂದು ತೀರ್ಮಾನಿಸಲಾಯಿತು.
Leave A Reply