ಕಸಬ್ ಉಗ್ರರಲ್ಲಿ ಸೊಳ್ಳೆ ಇದ್ದಂತೆ, ಹಫೀಜ್ ನನ್ನು ಗಲ್ಲಿಗೇರಿಸಿ: 26/11 ದಾಳಿ ಸಂತ್ರಸ್ತೆ ಆಗ್ರಹ
			      		
			      		
			      			Posted On November 26, 2017			      		
				  	
				  	
							0
						
						
										  	
			    	    
ಮುಂಬೈ: 2008ರ ಮುಂಬೈ ದಾಳಿಗೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಉಗ್ರರ ದಾಳಿಯ ಸಂತ್ರಸ್ತೆ ದೇವಿಕಾ ಎಂಬ ಯುವತಿ ಹಳೆಯ ನೆನಪು ಹೊರಹಾಕಿದ್ದು, ಅಜ್ಮಲ್ ಕಸಬ್ ಒಬ್ಬ ಸೊಳ್ಳೆ ಇದ್ದಂತೆ, ದಾಳಿ ರೂವಾರಿ ಸಯೀದ್ ಹಫೀಜ್ ನಂಥ ದೊಡ್ಡ ಉಗ್ರನನ್ನು ಗಲ್ಲಿಗೇರಿಸಿ ನಮಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ದಾರೆ.
ಮುಂಬೈ ದಾಳಿಯಲ್ಲಿ ದೇವಿಕಾ ಬಲಗಾಲು ಕಳೆದುಕೊಂಡಿದ್ದು, ಆಗ ದೇವಿಕಾ 9 ವರ್ಷದವರಾಗಿದ್ದರು. ಅಷ್ಟೇ ಅಲ್ಲ, ದೇವಿಕಾ ದಾಳಿ ನಂತರದ ಅತೀ ಕಿರಿಯ ಸಾಕ್ಷಿ ಎಂದು ಪರಿಗಣಿಸಿದ್ದು, ಇವರೇ ಅಜ್ಮಲ್ ಕಸಬ್ ನನ್ನು ಗುರುತಿಸಿದ್ದಲ್ಲದೇ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರು.
ದೇವಿಕಾ ತಂದೆ ಸಹ ಹಫೀಜ್ ಸಯೀದ್ ನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ್ದು, ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಿದ್ದು ನಮಗೆ ಸಂತಸ ತಂದಿದೆ. ಅದೇ ರೀತಿ ಹಫೀಜ್ ಸಯೀದ್ ನನ್ನು ಸಹ ಗಲ್ಲಿಗೇರಿಸಿದಾಗಲೇ ನಮಗೆ ಸಮಾಧಾನ ಎಂದಿದ್ದಾರೆ.
ಚಿತ್ರಕೃಪೆ: ಎಎನ್ಐ
		    				        
								    
								    








