ಮುಸ್ಲಿಂ ಆಟೋ ಚಾಲಕ, ಆತನ ಸಹಚರರಿಂದ ಯುವತಿಯ ಅತ್ಯಾಚಾರ, ಒಬ್ಬನ ಬಂಧನ
Posted On November 27, 2017
0
ಚಂಡೀಗಡ: ಮುಸ್ಲಿಂ ಆಟೋ ಚಾಲಕ ಹಾಗೂ ಆತನ ಇಬ್ಬರು ಸಹಚರರು ಚಂಡೀಗಡದಲ್ಲಿ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಸುದ್ದಿಯಾಗಿದೆ.
ಚಂಡೀಗಡದ 37ನೇ ಸೆಕ್ಟರ್ ನಿಂದ 42ನೇ ಸೆಕ್ಟರ್ ಗೆ ತೆರಳಲು ನವೆಂಬರ್ 17ರಂದು ಯುವತಿಯೊಬ್ಬರು ಆಟೋ ಹತ್ತಿದ್ದು, ನಿಗದಿತ ಸ್ಥಳಕ್ಕೆ ಬಿಡದೆ ಬೇರೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಈ ಕುರಿತು ಯುವತಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿ ಮೊಹಮ್ಮದ್ ಇರ್ಫಾನ್ (29) ಎಂಬಾತನನ್ನು ಬಂಧಿಸಿದ್ದಾರೆ.
ರಾತ್ರಿ 7.45 ಸುಮಾರಿಗೆ ಮೊದಲೇ ಇಬ್ಬರು ಇದ್ದ ಆಟೋವನ್ನು ಯುವತಿ ಹತ್ತಿದ್ದು, ದಾರಿ ತಪ್ಪಿಸಿ ಆತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಉತ್ತರ ಪ್ರದೇಶದ ಮೂಲದವ ಎಂದು ಪೊಲೀಸರು ತಿಳಿಸಿದ್ದು, ಗಾರಿಬ್ ಹಾಗೂ ಪೊಪ್ಪು ಎಂಬುವವರನ್ನು ಬಂಧಿಸಲು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
January 12, 2026









