ಅಹಿಂದ ಅಹಿಂದ ಎನ್ನುವ ಮುಖ್ಯಮಂತ್ರಿ ನೀಡಿದ ಜಾಹೀರಾತಿನಲ್ಲೇ ಅಂಬೇಡ್ಕರ್ ಭಾವಚಿತ್ರವಿಲ್ಲ
ಬೆಂಗಳೂರು: ಯಾವಾಗ ನೋಡಿದರೂ ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತರ ಪರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಾರೆ. ಆದರೆ ಕಾಂಗ್ರೆಸ್ ಹಿಂದಿನಿಂದಲೂ ಅಂಬೇಡ್ಕರ್ ಅವರನ್ನು ಅವಮಾನ ಮಾಡುತ್ತಲೇ ಇದೆ ಎಂಬುದನ್ನು ಈಗ ಮತ್ತೆ ಸಿದ್ದರಾಮಯ್ಯನವರು ಸಾಬೀತುಪಡಿಸಿದ್ದಾರೆ.
ಹೌದು, ಭಾನುವಾರ ಸಂವಿಧಾನ ದಿನಾಚರಣೆ ಹಿನ್ನೆಲೆ, ಹಲವು ಪತ್ರಿಕೆಗಳಿಗೆ ಇಡೀ ಪುಟದ ಜಾಹೀರಾತು ನೀಡಿದ್ದರು. ಆದರೆ ಇಡೀ ಪುಟದಲ್ಲಿ ಎಲ್ಲೂ ಅಂಬೇಡ್ಕರ್ ಅವರ ಭಾವಚಿತ್ರ ಹಾಕಿಲ್ಲ. ಆದರೆ ಅದರ ಕೆಳಗಡೆ ಮಾತ್ರ ಸಿದ್ದರಾಮಯ್ಯನವರೇ ಅಂಬೇಡ್ಕರ್ ಅವರಂತೆಯೇ ಪೋಸು ನೀಡಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದು, “ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಂವಿಧಾನ ದಿವಸದಂದು ಬಳಸದಷ್ಟು ದಾಷ್ಟ್ಯ ನಿಮ್ಮಲ್ಲಿರುವುದು ಖೇದಕರ. ಅದಕ್ಕೇ ಹೇಳುವುದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಕಲಿಯಿರಿ ಎಂದು” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಶೋಭಾ ಕರಂದ್ಲಾಜೆ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮತಕ್ಕಾಗಿ ಒಣ ಸಿದ್ಧಾಂತದ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿಜಬಣ್ಣ ಅಂಬೇಡ್ಕರ್ ವಿಷಯದಲ್ಲಿ ಬಯಲಾಗಿದ್ದು ಬೇಸರದ ಸಂಗತಿ.
Leave A Reply