ಜಗತ್ತಿಗೇ ನಿಷ್ಠೆಯ ಪಾಠ ಹೇಳುವ ಕೇಜ್ರಿವಾಲ್ ಆಪ್ ಆದಾಯ ಘೋಷಿಸಿಲ್ಲ, ಐಟಿ ನೋಟಿಸ್
ದೆಹಲಿ: ಇಡೀ ದೇಶದ ವ್ಯವಸ್ಥೆಯೇ ಸರಿ ಇಲ್ಲ, ಪ್ರಧಾನಿ ಮೋದಿ ಅವರ ಕಾರ್ಯವೈಖರಿ ವಿಫಲ, ಕೇಂದ್ರ ಸರ್ಕಾರ ಮಾಡಿದ ತಪ್ಪು ಇದು, ಅದು ತಪ್ಪು, ಯಾರೂ ಸರಿಯಿಲ್ಲ ಎಂದು ಹೇಳುವುದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ನಿಸ್ಸೀಮರು.
ಇಂಥಾ ಕೇಜ್ರಿವಾಲರು ಆಮ್ ಆದ್ಮಿ ಪಕ್ಷದ 13.16 ಕೋಟಿ ರೂಪಾಯಿ ಆದಾಯವನ್ನೇ ಘೋಷಿಸಿರಲಿಲ್ಲ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಆದಾಯ ತೆರಿಗೆ ಕಾಯಿದೆ 156ರ ಅನ್ವಯ ಆದಾಯ ತೆರಿಗೆ ಇಲಾಖೆ ಆಮ್ ಆದ್ಮಿ ಪಕ್ಷದ ಎಲ್ಲ ಆದಾಯದ ದಾಖಲೆ ಪರಿಶೀಲಿಸಿದ್ದು, 30.67 ಕೋಟಿ ರೂಪಾಯಿ ತೆರಿಗೆ ನೋಟಿಸ್ ನೀಡಿದೆ.
2014-15, 2015-16ರಲ್ಲಿ ಆಪ್ ಪಕ್ಷದ ತೆರಿಗೆ ಸಹಿತ ಆದಾಯ 68.44 ಕೋಟಿ ರೂಪಾಯಿ. ಇಷ್ಟಾದರೂ ಆಮ್ ಆದ್ಮಿ ಪಕ್ಷದ ಅಕೌಂಟ್ ಪುಸ್ತಕದಲ್ಲಿ ದೇಣಿಗೆ ಆದಾಯದ ಕುರಿತು ಉಲ್ಲೇಖಿಸಿರಲಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಅಧಿಕಾರಿಗಳು ಕಾನೂನಿನ ಅನ್ವಯ ದಾಖಲೆ ಪರಿಶೀಲಿಸಿ, 30 ಕೋಟಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಿದ್ದು, ಇದರಲ್ಲೂ ಮೋದಿ ಅವರನ್ನು ಟೀಕಿಸಲು ಹೊರಟ ಕೇಜ್ರಿವಾಲ್, ಇದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ. ನೀವು ಅಕೌಂಟ್ ಪುಸ್ತಕದಲ್ಲಿ ಸರಿಯಾದ ಮಾಹಿತಿ ಇಟ್ಟಿದ್ದರೆ, ಆದಾಯ ಘೋಷಿಸಿದ್ದರೆ ಆದಾಯ ತೆರಿಗೆ ಇಲಾಖೆಯವರೇಕೆ ದಾಳಿ ಮಾಡುತ್ತಿದ್ದರು ಎಂಬುದು ಸಾಮಾನ್ಯರ ಪ್ರಶ್ನೆಯಾಗಿದೆ.
Leave A Reply