ಧರ್ಮದಿಂದ ಮುಕ್ತಿಗೊಳಿಸಲು ಎನ್ ಜಿಒಗಳಿಗೆ ಅಮೆರಿಕ ಘೋಷಿಸಿರುವ ಹಣ ಎಷ್ಟು ಗೊತ್ತಾ?
ವಾಷಿಂಗ್ಟನ್: ಭಾರತದಲ್ಲಿ ಧರ್ಮದಿಂದ ಮುಕ್ತಿಗೊಳಿಸುತ್ತೇವೆ, ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಿಂಸೆ ನಿಲ್ಲಿಸುತ್ತೇವೆ ಎಂದು ಮೆಲ್ಲಗೆ ಕ್ರಿಸ್ತನ ಜಪ ಪಠಿಸುವ ಸರ್ಕಾರೇತರ ಸಂಸ್ಥೆ (ಎನ್ ಜಿಒ)ಗಳಿಗೆ ಅಮೆರಿಕ ಭಾರೀ ಹಣದ ಆಮಿಷ ನೀಡಿದೆ.
ಅದೂ ಎಷ್ಟು ಗೊತ್ತಾ? ಬರೋಬ್ಬರಿ 5 ಲಕ್ಷ ಡಾಲರ್. 3.22 ಕೋಟಿ ರುಪಾಯಿ!
ಅಮೆರಿಕದ ಕಾರ್ಮಿಕ ಹಾಗೂ ಮಾನವ ಹಕ್ಕುಗಳ ಸಚಿವಾಲಯ ಘೋಷಣೆ ಮಾಡಿದ್ದು, ಭಾರತದಲ್ಲಿ ಯಾವ ಸಂಸ್ಥೆ ಬಹು ಹಾಗೂ ಅಲ್ಪಸಂಖ್ಯಾತ ಜನರನ್ನು ಧರ್ಮದಿಂದ ಮುಕ್ತಿಗೊಳಿಸುತ್ತೇವೆ, ಹಿಂಸೆ ನಿಲ್ಲಿಸುತ್ತೇವೆ ಎಂದು ಕಾರ್ಯನಿರ್ವಹಿಸುವುದಾಗಿ ಘೋಷಣೆ ಹಾಗೂ ಆ ದಿಸೆಯಲ್ಲಿ ಕಾರ್ಯೋನ್ಮುಖವಾಗುತ್ತದೆಯೋ, ಅಂಥ ಸಂಸ್ಥೆಗಳಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡುವುದಾಗಿ ಘೋಷಿಸಿದೆ.
ಧರ್ಮದ ಹಿಂಸೆಯಿಂದ ಮುಕ್ತಿಗೊಳಿಸುವುದು ಹೇಗೆ, ಅದರಲ್ಲೂ ಅಲ್ಪಸಂಖ್ಯಾತರಲ್ಲಿರುವ ಒಡಕನ್ನು ಬಂಡವಾಳವಾಗಿಟ್ಟುಕೊಂಡು, ಅವರಿಗೆ ಶಿಕ್ಷಣ ನೀಡುವ ಆಮಿಷ ಒಡ್ಡಿ, ಮಾನವ ಹಕ್ಕುಗಳ ರಕ್ಷಣೆ ಹೆಸರಲ್ಲಿ ಯಾವ ಸಂಸ್ಥೆ ಕಾರ್ಯನಿರ್ವಹಿಸುವ ಮನವಿ ಸಲ್ಲಿಸಿದರೆ ಅವರಿಗೆ ಅಮೆರಿಕ ಹಣ ನೀಡಲಿದೆ ಎಂದು ತಿಳಿಸಿದೆ.
ಅಲ್ಲದೆ ಇದು ಭಾರತದಲ್ಲಿ ಕ್ರಿಶ್ಚಿಯನ್ನರ ಮತಾಂತರದ ದೊಡ್ಡ ಅಸ್ತ್ರವಾಗಿದೆ ಎಂದು ತಿಳಿದುಬಂದಿದೆ, ಧರ್ಮದಿಂದ ಮುಕ್ತಿಗೊಳಿಸುವ ಹೆಸರಲ್ಲಿ, ಶಾಂತಿ ಸ್ಥಾಪನೆ ಹೆಸರಲ್ಲಿ ಜನರನ್ನು ಕ್ರೈಸ್ತ ಧರ್ಮದತ್ತ ಸೆಳೆಯುವುದು ಇದರ ಉದ್ದೇಶವಾಗಿದೆ ಎಂಬ ಆರೋಪ ಕೇಳಿಬಂದಿವೆ.
ಅಷ್ಟೇ ಅಲ್ಲ, ಹಿಂದುಳಿದಿರುವ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಕಜಕಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ ಸೇರಿ ಸುಮಾರು 28 ರಾಷ್ಟ್ರಗಳ ಎನ್ ಜಿಒಗಳಿಗೂ ಅಮೆರಿಕ ಹೆಚ್ಚಿನ ಹಣ ನೀಡಿ ಮತಾಂತರ ಪರ್ವ ನಡೆಸಲು ಉತ್ತೇಜನ ನೀಡುತ್ತಿದೆ.
ಆದಾಗ್ಯೂ, ಭಾರತದಲ್ಲಿ ಎನ್ ಜಿಒ ಹೆಸರಲ್ಲಿ ಮತಾಂತರ ಮಾಡುವ, ವಿಷ ಬೀಜ ಬಿತ್ತುವ ನಕಲಿ ಸರ್ಕಾರೇತರ ಸಂಸ್ಥೆಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಅಸ್ತ್ರ ಹೂಡಿದ್ದು, ಅಮೆರಿಕದಿಂದ ಹಣ ಪಡೆದು ಕ್ರಿಸ್ತನ ಪ್ರಚಾರ ಮಾಡುವ ಇಂಥ ಸಂಸ್ಥೆಗಳನ್ನೂ ನಿಷೇಧಿಸಬೇಕು ಎಂಬ ಮಾತುಕೇಳಿಬಂದಿವೆ.
Leave A Reply