2017ರಲ್ಲಿ ಕಾಶ್ಮೀರದ 193 ಉಗ್ರರಷ್ಟೇ ಅಲ್ಲ.. ಅರಣ್ಯದಲ್ಲಿ ಅವಿತಿದ್ದ 155 ಕೆಂಪು ಉಗ್ರರು ಮಟಾಶ್
ದೆಹಲಿ: ಭಾರತಕ್ಕೆ ಕಂಟಕವಾಗಿರುವ ಮುಸ್ಲಿಂ ಭಯೋತ್ಪಾದಕರು ಮತ್ತು ಅರಣ್ಯದಲ್ಲಿ ಅವಿತು ದೇಶದ ವಿರುದ್ಧವೇ ಹುನ್ನಾರ ನಡೆಸುವ ಕೆಂಪು ಉಗ್ರರ ಪಾಲಿಗೆ ಕರಾಳ ವರ್ಷ 2017. ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ರಕ್ಷಣೆಗೆ ಅಡ್ಡಗಾಲಾಗಿರುವ ಸಂಘಟನೆಗಳನ್ನು ಸದೆಬಡೆಯುವ ಕಾರ್ಯ ನಿರಂತರವಾಗಿ ಮುಂದುವರಿಸಿದೆ. ಅದಕ್ಕೆ ಸಾಕ್ಷಿಯಾಗಿ 2017ರಲ್ಲೇ ಕಾಶ್ಮೀರದಲ್ಲಿ 193 ಉಗ್ರರನ್ನು ಸೇನೆ ಹತ್ಯೆ ಮಾಡಿದ್ದರೆ. ಇದೇ ವರ್ಷ 155 ನಕ್ಸಲರನ್ನು ನರಕಕ್ಕೆ ಕಳುಹಿಸಿದೆ.
ಇದನ್ನು ಯಾವುದೋ ಸರ್ಕಾರಿ ಸಂಸ್ಥೆಯೋ ಅಥವಾ ಸರಕಾರೇತರ ಸಂಸ್ಥೆ ಹೇಳುತ್ತಿಲ್ಲ. ಮಾವೋವಾದಿಗಳೇ ತಮ್ಮ ವಾರ್ಷಿಕ ವರದಿಯಲ್ಲಿ ಡಿಸೆಂಬರ್ 2 ರವೇಳೆಗೆ 155 ಕೆಂಪು ಉಗ್ರರ ಹತ್ಯೆಯಾಗಿದ್ದಾರೆ ಎಂದು ಕಣ್ಣಿರಿಟ್ಟಿದ್ದಾರೆ. ಪಿಪಲ್ ಲಿಬರೇಷನ್ ಗೋರಿಲ್ಲಾ ಆರ್ಮಿ ಈ ವರದಿಯನ್ನು ಸಿಪಿಐಎಂಎಲ್ ಸಂಸ್ಥಾಪನೆ ದಿನವಾದ ಡಿಸೆಂಬರ್ 2ರಂದು ಬಿಡುಗಡೆ ಮಾಡಿದೆ.
ಮಾವೋವಾದಿಗಳ ದಕ್ಷಿಣ ವಲಯ ಬ್ಯೂರೋ ವರದಿ ಪ್ರಕಾರ ‘ದಂಡಕಾರಣ್ಯ ಪ್ರದೇಶ ಒಂದರಲ್ಲೇ 115 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಈ ದಂಡಕಾರಣ್ಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಓಡಿಶಾ, ತೆಲಂಗಾಣ ಮತ್ತು ಛತ್ತಿಸಗಡ್ ಪ್ರದೇಶವನ್ನು ಒಳಗೊಂಡಿದೆ. ಇನ್ನು 45 ಉಗ್ರರು ಛತ್ತಿಸಗಡ್ ರಾಜ್ಯದಲ್ಲಿ ಸೈನಿಕ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದಾರೆ. ಇದರಲ್ಲಿ 30 ಮಹಿಳೆಯರು ಇದ್ದಾರೆ ಎಂಬುದು ಗಮನಾರ್ಹ.
ಮಾವೋವಾದಿಗಳ ಕೇಂದ್ರೀಯ ಮಂಡಳಿ ಸದಸ್ಯ ನಾರಾಯಣ ಸನ್ಯಾಲ್ ಮತ್ತು ಆತನ ಸಹಚರ ಕುಪ್ಪು ಡಿಯೋರಾಜ್ ಹತ್ಯೆಯಾದವರಲ್ಲಿ ಪ್ರಮುಖರು.
ಕೆಂಪು ಉಗ್ರರ ಗುಂಡಿಗೆ ಸೈನಿಕರು, ಸಾರ್ವಜನಿಕರೂ ಬಲಿ
ಗೃಹ ಇಲಾಖೆ ಮಾಹಿತಿ ಪ್ರಕಾರ 2017ರ ಅಕ್ಟೋಬರ್ 31 ರ ಹೊತ್ತಿಗೆ 70 ಸೈನಿಕರು ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದರೆ. 122 ಸೈನಿಕರು ಗಾಯಾಳುಗಳಾಗಿದ್ದಾರೆ. ಅಲ್ಲದೇ 156 ಮುಗ್ದ ಸಾರ್ವಜನಿಕರು ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ. ದೇಶದ 10 ರಾಜ್ಯಗಳ 106 ಜಿಲ್ಲೆಗಳಲ್ಲಿ ನಕ್ಸಲರು ಸಕ್ರಿಯವಾಗಿದ್ದಾರೆ. ಈ ಎಲ್ಲ ಜಿಲ್ಲೆಗಳನ್ನು ಹೊಂದಿರುವ ರೆಡ್ ಕಾರಿಡಾರ್ ರೂಪಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗೃಹ ಇಲಾಖೆ ತಿಳಿಸಿದೆ.
Leave A Reply