ಮಗನನ್ನು ಮನೆಗೆ ಸೇರಿಸಿದಕ್ಕೆ ಸೈನಿಕರಿಗೆ ನಮೋ ಎಂದ ಮಾಜಿ ಉಗ್ರನ ತಂದೆ
ಅನಂತನಾಗ (ಶ್ರೀನಗರ): ಫುಟಬಾಲ್ ಪಟುವಾಗಿದ್ದ ಮಜೀದ್ ಖಾನ್ ಉಗ್ರನಾಗಿದ್ದ. ಆತನ ಮನವೊಲಿಸಿ ಮರಳಿ ಸಮಾಜದ ಮುಖ್ಯವಾಹಿನಿಗೆ ಕರೆದುಕೊಂಡು ಬಂದಿದ್ದಕ್ಕೆ ತಂದೆ ಇರ್ಷಾದ್ ಅಹ್ಮದ್ ಖಾನ್ ಭಾರತೀಯ ಸೈನಿಕರಿಗೆ ಧನ್ಯವಾದ ಹೇಳಿದ್ದಾರೆ.
ಫುಟಬಾಲ್ ಆಟಗಾರನಾಗಿದ್ದ ಮಜೀದ್ ಖಾನ್ ಲಷ್ಕರ್ ಈ ತಯ್ಯಬಾ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ. ತಾಯಿ ಮನವಿ ಮೆರೆಗೆ ಮರಳಿ ಮುಖ್ಯವಾಹಿನಿಗೆ ಬರಲು ಇಚ್ಚಿಸಿದ. ಆತನನ್ನು ಸೈನಿಕರು ಗೌರವಯುತವಾಗಿ ಸ್ವಾಗತಿಸಿದ್ದರು. ಇದು ಮಜೀದ್ ಖಾನ್ ಕುಟುಂಬಸ್ಥರಲ್ಲಿ ಸಂತೋಷ ಮೂಡಿಸಿತ್ತು. ತಮ್ಮ ಮಗ ಮರಳಿ ಮನೆಗೆ ಬಂದರೆ ಸೈನಿಕರು ಸಮಸ್ಯೆಯೊಡ್ಡುತ್ತಾರೆ ಎಂಬ ಭೀತಿಯಲ್ಲಿದ್ದ ಕುಟುಂಬಕ್ಕೆ ಸೈನ್ಯ ಅಭಯ ಹಸ್ತ ನೀಡಿದ್ದು, ಹೊಸ ಆಕಾಂಕ್ಷೆ ಮೂಡಿಸಿದೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಮಜೀದ್ ಖಾನ್ ತಂದೆ ತಂದೆ ಇರ್ಷಾದ್ ಅಹ್ಮದ್ ಖಾನ್ ‘ನನ್ನ ಮಗನನ್ನು ಮರಳಿ ಮನೆಗೆ ಕರೆತರಲು ಶ್ರಮಿಸಿದ ಎಲ್ಲ ಸೈನ್ಯಾಧಿಕಾರಿಗಳಿಗೆ, ಈ ಸುದ್ದಿಯನ್ನು ಸಕಾರಾತ್ಮಕವಾಗಿ ಬಿಂಬಿಸಿರುವ ಎಲ್ಲ ಮಾಧ್ಯಮಗಳಿಗೆ ಮತ್ತು ಸಹಕಾರ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನನ್ನ ಮಗನ ಜೊತೆ ಮಾತನಾಡಲು ನನಗೆ ಎಲ್ ಟಿ ಟಿ ಉಗ್ರರು ಕೇವಲ ಐದು ನಿಮಿಷ ಸಮಯ ನೀಡಿದ್ದರು. ಆತನನ್ನು ಒತ್ತಾಯವಾಗಿ ಬಂಧನದಲ್ಲಿಟ್ಟು, ಉಗ್ರತ್ವವನ್ನು ತುಂಬಲಾಗುತ್ತಿತ್ತು. ಆತನ ಮನದಾಳ ಅರಿತು ನಾನು ಪೊಲೀಸರಿಗೆ ದೂರು ನೀಡಿದ್ದೇ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯಾಚರಣೆ ನಡೆಸಿದರು. ಆದ್ದರಿಂದ ಇಂದು ಮಗ ಮನೆಯಲ್ಲಿ ನೆಮ್ಮದಿಯಿಂದ ಹೊಸ ಜೀವನಕ್ಕೆ ನೆಲೆ ಕಲ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಇರ್ಷಾದ್ ಖಾನ್.
ಮಜೀದ್ ಮುಗ್ದ ಹುಡುಗ ಆತ ಯಾವತ್ತು ಪ್ರತ್ಯೇಕವಾದಿಗಳ ಹೋರಾಟದಲ್ಲೂ ಭಾಗಿಯಾಗಿರಲಿಲ್ಲ, ಕಲ್ಲು ತೂರಾಟದಿಂದಲೂ ದೂರವಿದ್ದ. ಆತನ ಮುಗ್ದತೆಯನ್ನೆ ದುರ್ಬಳಕೆಯನ್ನಾಗಿಸಿಕೊಳ್ಳಲಾಗಿದೆ ಎನ್ನುತ್ತಾರೆ ಮಜೀದ್ ಖಾನ್ ಕುಟುಂಬಸ್ಥರು.
Leave A Reply