ಸ್ಮಾರ್ಟ್ ಫೋನ್ ಗಳಲ್ಲಿನ 40 ಆ್ಯಪ್ ಡಿಲೀಟ್ ಮಾಡಿ ಎಂದು ಸೈನಿಕರಿಗೆ ರಕ್ಷಣಾ ಇಲಾಖೆ ಸೂಚಿಸಿದ್ದು ಏಕೆ..?
ಕಾಶ್ಮೀರ: ಗಡಿಯಲ್ಲಿ ನಿತ್ಯ ನಿದ್ದೆ ಬಿಟ್ಟು ದೇಶವನ್ನು ಕಾಯುತ್ತಿರುವ ಸೈನಿಕರ ಸ್ಮಾರ್ಟ್ ಫೋನ್ ಗಳಲ್ಲಿನ 40 ಆ್ಯಪ್ ಗಳನ್ನು ಅಳಿಸಿ ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ. ಇದಕ್ಕೆ ಮೂಲಕ ಕಾರಣ ಭಾರತದ ವಿರುದ್ಧ ಸದಾ ಹಲ್ಲು ಮಸೆಯುವ, ಗಡಿಯಲ್ಲಿ ಸದಾ ಕಿರಿ ಕಿರಿ ಕೊಡುವ ಚೀನಾದ ಷಡ್ಯಂತ್ರಕ್ಕೆ ಬಲಿಯಾಗಬಾರದು ಎಂದು. ಸೈನಿಕರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಬಳಸುವ ಆ್ಯಪ್0 ಗಳ ಫೋನ್ ನಲ್ಲಿನ ಮಾಹಿತಿಯನ್ನು ಚೀನಾ ಹ್ಯಾಕ್ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ರಕ್ಷಣಾ ಇಲಾಖೆ ಈ ಸೂಚನೆ ನೀಡಿದ್ದು, 40 ಆ್ಯಪ್ ಗಳ ಸರ್ವರ್ ಚೀನಾದಲ್ಲಿ ಕಪಿಮುಷ್ಟಿಯಲ್ಲಿವೆ. ಅವರು ಸೈನಿಕರ ಮೊಬೈಲ್ ಮೂಲಕ ಸೈನ್ಯದ ಬಲ, ಸೈನಿಕರಿರುವ ತಾಣವನ್ನು ಗುರುತಿಸುತ್ತದೆ ಎಂಬ ಆತಂಕಕಾರಿ ಮಾಹಿತಿ ಹೊರ ಹಾಕಿದೆ. ಇದು ಸೈನ್ಯದ ಎಲ್ಲ ತಂತ್ರಗಳನ್ನು ತಿಳಿಯಲು ಅನುಕೂಲಕರವಾಗಿದೆ ಆದ್ದರಿಂದ ಈ ಸೂಚನೆ ನೀಡಿದೆ.
ಭಾರತೀಯ ರಕ್ಷಣಾ ಇಲಾಖೆ ಮಾಹಿತಿ ಪ್ರಕಾರ ಚೀನಾದ ಟೆಲಿಕಾಂ ವಸ್ತುಗಳು ಚೀನಾ ಸೈನ್ಯಕ್ಕೆ ಪೂಕರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಸ್ಮಾರ್ಟ್ ಫೋನ್ ಗಳಾದ ಝಡ್ ಟಿ ಇ ಮತ್ತು ಹುವೈ ಫೋನ್ ಗಳನ್ನು ಗಡಿಯಲ್ಲಿ ಸೈನಿಕರು ಬಳಸದಂತೆ ರಕ್ಷಣಾ ಇಲಾಖೆ ಸೂಚಿಸಿದೆ.
ಸೈನಿಕರಿಗೆ ಕಂಟಕವಾಗಿರುವ ಕೆಲ ಆ್ಯಪ್ ಗಳು
Nes Dog
CM Browser
MI Community
DU Privacy and Selfie City
Beautyplus
MI Video call-Xiaomi
Mail Master
Leave A Reply