ಭಯೋತ್ಪಾಕ ಮನೆಯಲ್ಲಿದ್ದರೇ ರಕ್ಷಣೆ, ಮರ್ಯಾದೆ ಇರುತ್ತದೆಯೇ ಎಂಬ ಹಾದಿಯಾ ಅಪ್ಪನ ಮನದಾಳ ಅರಿಯಬೇಕಲ್ಲವೇ?
ದೆಹಲಿ: ಕುಟುಂಬದಲ್ಲಿ ಬೇರೆ ಬೇರೆ ಧರ್ಮದವರು ಇದ್ದರೇ ಹೇಗೋ ಸಹಿಸಿಕೊಂಡು ಜೀವನ ನಡೆಸಬಹುದು. ಆದರೆ ವಿಶ್ವಾಧ್ಯಂತ ವಿಧ್ವಸಂಕ ಕೃತ್ಯಗಳನ್ನು ನಡೆಸಿ, ಅಮಾಯಕರ ಜೀವ ಬಲಿ ಪಡೆಯುತ್ತಿರುವ ಭಯೋತ್ಪಾಕ ಸಂಘಟನೆಯ ಒಬ್ಬ ಸದಸ್ಯ ಮನೆಯಲ್ಲಿದ್ದರೇ ನೆಮ್ಮದಿಯಿಂದ ಬದುಕಲಾದಿತೇ? ಇದು ಕೇರಳದಲ್ಲಿ ಲವ್ ಜಿಹಾದ್ ಗೆ ಬಲಿಯಾದ ಹಾದಿಯಾ ತಂದೆ ಕೆ.ಎಂ.ಅಶೋಕನ್ ಪ್ರಶ್ನೆ.
ಇದರಲ್ಲೆನ್ನಾದರೂ ಕೊಳಕು ಹುಡುಕಬಹುದೇ?. ಸಾಧ್ಯವೇ ಇಲ್ಲ. ನಮ್ಮದೇ ಮನೆಯಲ್ಲಿ ಒಂದು ಸಣ್ಣ ಕಳ್ಳತನ ಮಾಡಿದ್ದ ವ್ಯಕ್ತಿಯಿದ್ದರೇ ಇಡೀ ಕುಟುಂಬವನ್ನೇ ಅನುಮಾನದಿಂದ, ಆಲಸ್ಯದಿಂದ ನೋಡಲಾಗುತ್ತದೆ. ಅಂತದರಲ್ಲಿ ಐಸಿಸ್ ನಂತಹ ಭಯೋತ್ಪಾದಕ ಸಂಘಟನೆಯ ಒಬ್ಬ ಸದಸ್ಯ ಮನೆಯಲ್ಲಿದ್ದರೇ ಆತನಿರುವ ಓಣಿ, ಊರನ್ನೇ ಭೀತಿಯಿಂದ ನೋಡುವಂತ ಸ್ಥಿತಿ ಐಸಿಸ್ ಸೃಷ್ಟಿಸಿದೆ.
ಈ ಎಲ್ಲ ಅವಮಾನ, ಅಪಮಾನ ಮತ್ತು ಜೀವ ಭೀತಿಯಲ್ಲೇ ಹಾದಿಯಾ ಹೆತ್ತವರ ಕುಟುಂಬ ದಿನ ಕಳೆಯುತ್ತಿದೆ. ಅದಕ್ಕಾಗಿಯೇ ನಮ್ಮ ಮಗಳನ್ನು ನಮಗೆ ಕೊಡಿಸಿ ಎಂದು ಕೇಳಿದ್ದಾರೆ. ಕೋರ್ಟ್ ಹಾದಿಯಾಳ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದೆ.
ನನ್ನ ಮಗಳಿಗೆ ಸುಪ್ರೀಂ ಕೋರ್ಟ್ ಸ್ವಾತಂತ್ರ್ಯ ನೀಡಿದೆ. ಅದನ್ನು ನಾನು ಸ್ವಾಗತಿಸುತ್ತೇನೆ. ಹಾದಿಯಾ ಮುಗ್ದೆ ಅವಳಿಗೆ ಸಿರಿಯಾದ ಬಗ್ಗೆ ಅರಿವಿಲ್ಲ. ಅವಳು ಇಸ್ಲಾಮಗೆ ಮತಾಂತರವಾಗಿದ್ದನ್ನು ಹೇಗೋ ಸಹಿಸಿಕೊಳ್ಳಬಹುದು. ಆದರೆ ಕುಟುಂಬದಲ್ಲಿ ಒಬ್ಬ ಭಯೋತ್ಪಾದಕ ಇರುವುದು ಒಪ್ಪಲು ಅಸಾಧ್ಯ ಎನ್ನುತ್ತಾರೆ ಹಾದಿಯಾ ಅಪ್ಪ ಕೆ.ಎಂ. ಅಶೋಕನ್.
ಕೋರ್ಟ್ ಅವಳಿಗೆ ಓದಲು ಅವಕಾಶ ನೀಡಬೇಕು ಎಂದು ಸೂಚಿಸಿದೆ. ಸುಪ್ರೀಂ ಕೋರ್ಟ್ ಹಾದಿಯಾಗೆ ರಕ್ಷಣೆ ನೀಡಲು ಸೂಚಿಸಿದೆ. ಕೋರ್ಟ್ ನಿಗ್ರಾಹಣೆಯಲ್ಲಿ ಅವಳು ಭದ್ರವಾಗಿರುತ್ತಾಳೆ ಎನ್ನುವ ಅಶೋಕನ್ ಮನದಾಳದಲ್ಲಿ ತಾನು ಹೆತ್ತ ಕಂದಮ ಮತ್ತು ತನ್ನ ಇಡೀ ಕುಟುಂಬ ಸುಖವಾಗಿ ಇರಬೇಕು ಎಂದು ಭಯಸಿದ್ದರಲ್ಲಿ ತಪ್ಪು ಹುಡುಕುವರು ಸಿರಿಯಾದ ಐಸಿಸ್ ಮನಸ್ಥಿತಿಯವರೇ ಹೊರತು ಬೇರೆಯಲ್ಲ.
ಅಷ್ಟಕ್ಕೂ ಹಾದಿಯಾ ಕುಟುಂಬ ಸುಖಾ ಸುಮ್ಮನೇ ಆರೋಪ ಮಾಡುತ್ತಿಲ್ಲ. ರಾಷ್ಟ್ರೀಯ ತನಿಖಾ ದಳವೇ ಅದು ಲವ್ ಜಿಹಾದ್, ಆತ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುದರ ಕುರಿತು ಮಾಹಿತಿ ನೀಡಿದೆ. ಭಯೋತ್ಪಾಕ ಎಂದು ರಗಳೆ ಇರುವಾಗ ಯಾವ ಕುಟುಂಬ ತಾನೇ ತನ್ನ ಮಗಳು ಅಂತಹವನ ಜೊತೆ ಇರಬೇಕು ಎಂದು ಭಯಸುತ್ತದೆ ನೀವೇ ಹೇಳಿ.
Leave A Reply