ನ್ಯಾಯಮೂರ್ತಿ ಸಾವು ಸಹಜ ಎಂದ ಕುಟುಂಬ, ಶಾ ವಿರೋಧಿಗಳಿಗೊಂದು ಶಾಕ್

ಮುಂಬೈ: ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಆರೋಪ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಸರು ತಳುಕು ಬೀಳುತ್ತಲೇ ಧುಲ್ಯೋ ಎಂದು ಎದ್ದು ನಿಂತ ಎಡಬಿಡಂಗಿಗಳು, ಕಾಂಗಿಗಳು ಅಮಿತ್ ಶಾ ಅವರೇ ಎನ್ ಕೌಂಟರ್ ಮಾಡಿದ್ದಾರೆ ಎಂಬ ರೀತಿ ವರ್ತಿಸಿದರು. ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬ್ರಿಜ್ ಮೋಹನ್ ಲೋಯಾ ನಿಧನರಾದಾಗಲಂತೂ ಶಾ ಅವರೇ ಕೊಲೆ ಮಾಡಿದ್ದರು ಎಂಬ ರೀತಿ ವರ್ತಿಸಿದ್ದರು.
ಆದರೆ ನ್ಯಾಯಮೂರ್ತಿ ಸಾವಿನ ಪ್ರಕರಣದಲ್ಲಿ ಅಮಿತ್ ಶಾ ಪಾತ್ರ ಏನೂ ಇಲ್ಲ ಎಂಬುದು ಸಾಬೀತಾಗುವ ಕಾಲ ಸನ್ನಿಹಿತವಾಗಿದ್ದು, ನ್ಯಾಯಮೂರ್ತಿ ಸಾವಿನ ಕುರಿತು ಯಾವುದೇ ಅನುಮಾನ ಇಲ್ಲ. ಅವರದ್ದು ಸಹಜ ಸಾವು ನ್ಯಾಯಮೂರ್ತಿ ಕುಟುಂಬದವರೇ ಹೇಳಿದ್ದಾರೆ ಎಂದು ಬಾಂಬೇ ಹೈಕೋರ್ಟ್ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹೇಳಿದ್ದಾರೆ.
ನನ್ನ ತಂದೆ ನಾಗಪುರದಲ್ಲಿ ಸಹ ನ್ಯಾಯಮೂರ್ತಿಯೊಬ್ಬರ ಮಗಳ ಮದುವೆಗೆ ಹೋಗುವಾಗ ಮೃತಪಟ್ಟಿದ್ದಾರೆ. ತಂದೆ ಮೃತಪಟ್ಟ ನ.30ರಂದು ಅವರ ಜತೆಗಿದ್ದ ನ್ಯಾಯಮೂರ್ತಿಗಳ ಮೇಲೆ ನಂಬಿಕೆ ಇದೆ. ನನ್ನ ತಂದೆಯದ್ದು ಸಹಜ ಸಾವು ಎಂದು ಬ್ರಿಜ್ ಮೋಹನ್ ಲೋಯಾ ಪುತ್ರ ಅನುಜ್ ಬಾಂಬೇ ಹೈಕೋರ್ಟ್ ನ್ಯಾಯಮೂರ್ತಿ ಮಂಜುಳಾ ಅವರಿಗೆ ಪತ್ರ ಸಲ್ಲಿಸಿದ್ದಾರೆ.
ಅಲ್ಲದೆ ತಂದೆಯ ಸಾವಿನ ಕುರಿತು ತನಿಖೆ ನಡೆಸಿದ ತಂಡದ ಸಮಗ್ರತೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
2014ರಲ್ಲಿ ಬ್ರಿಜ್ ಮೋಹನ್ ಲೋಹಿಯಾ ಮೃತಪಟ್ಟಾಗ, ಅವರು ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಸಾವಿನ ಹಿಂದೆ ಅಮಿತ್ ಶಾ ಸೇರಿ ಹಲವರ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದ್ದವು. ಇದೇ ಆರೋಪದ ಮೇಲೆ ಅಮಿತ್ ಶಾ ವಿರುದ್ಧ ಮನಬಂದಂತೆ ಟೀಕಿಸಲಾಗಿತ್ತು. ಈಗ ನ್ಯಾಯಮೂರ್ತಿ ಸಹಜವಾಗಿಯೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರೇ ನ್ಯಾಯಾಲಯಕ್ಕೆ ತಿಳಿಸಿದ್ದು, ಪ್ರಕರಣದಲ್ಲಿ ಅಮಿತ್ ಶಾ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
Leave A Reply