ಜಿಎಸ್ಟಿಯನ್ನು ಗಬ್ಬರ್ ಟ್ಯಾಕ್ಸ್ ಎಂದ ರಾಹುಲ್ ಗಾಂಧಿಗೆ ಮೋದಿ ಕೊಟ್ಟ ಟಾಂಗ್ ಏನು ಗೊತ್ತಾ?
ಗಾಂಧಿನಗರ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಜಿಎಸ್ಟಿಯನ್ನು “ಗಬ್ಬರ್ ಸಿಂಗ್ ಟ್ಯಾಕ್ಸ್” ಎಂದು ಟೀಕಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಮೋದಿ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.
ಎಲ್ಲ ಉತ್ಪನ್ನಗಳಿಗೂ ಶೇ.18ರಷ್ಟು ಜಿಎಸ್ಟಿ ದರ ವಿಧಿಸಬೇಕು ಎಂದು ಅರ್ಥಶಾಸ್ತ್ರಜ್ಞರೊಬ್ಬರು ಹೇಳಿದ್ದು, ಇದು ಗ್ರ್ಯಾಂಡ್ ಸ್ಟುಪಿಡ್ ಟ್ಯಾಕ್ಸ್ (ಜಿಎಸ್ಟಿ) ಎಂದು ಮೋದಿ ರಾಹುಲ್ ಗಾಂಧಿಗೆ ಛೇಡಿಸಿದ್ದಾರೆ.
ಬಡವರು ಬಳಸುವ ಉಪ್ಪು ಹಾಗೂ ಶ್ರೀಮಂತರ ಐಷಾರಾಮಿ ಕಾರಿಗೂ ಶೇ.18ರಷ್ಟೇ ಜಿಎಸ್ಟಿ ವಿಧಿಸಬೇಕು ಎಂದು ಹೇಳುವುದು ಯಾವ ರೀತಿಯ ಸಲಹೆ. ಕೆಲವರು ತಮ್ಮನ್ನು ತಾವೇ ಸ್ಮಾರ್ಟ್ ಎಂದು ತಿಳಿದುಕೊಂಡಿದ್ದರ ಪರಿಣಾಮ ಇದು ಎಂದು ಮೋದಿ ಹೇಳಿದ್ದಾರೆ.
70 ವರ್ಷ ದೇಶವನ್ನು ದರೋಡೆ ಮಾಡಿದವರಿಗೆ ನನ್ನ ಆಡಳಿತ ಅರಗಿಸಿಕೊಳ್ಳಲು ಆಗುತ್ತಿಲ್ಲ. ಜೀವನಪೂರ್ತಿ ದೇಶವನ್ನು ಕೊಳ್ಳೆ ಹೊಡೆದ ಅವರಿಗೆ ಚೋರರು (ಗಬ್ಬರ್ ಸಿಂಗ್) ಮಾತ್ರ ನೆನಪಿರುತ್ತಾರೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಕೇಂದ್ರ ಸರ್ಕಾರವನ್ನು ಟೀಕಿಸಿಯೇ ನಾಯಕ ಎನಿಸಿಕೊಳ್ಳಲು ಹೊರಟಿರುವ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ದರು.
Leave A Reply