ತಿಂಗಳಿಗೊಂದು ರಾಕೆಟ್, ಆಕಾಶಕ್ಕೇ ಗುರಿ ಇಡುವ ಇಸ್ರೋ ಸಂಸ್ಥೆಯದು ಗ್ರೇಟ್!
ದೆಹಲಿ: ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ, ವಿಜ್ಞಾನಿಗಳ ಪರಿಶ್ರಮದಿಂದ ಇಸ್ರೋ ಈಗಾಗಲೇ ಏಕಕಾಲದಲ್ಲಿ ನೂರಕ್ಕೂ ಅಧಿಕ ರಾಕೆಟ್ ಉಡಾಯಿಸಿ ದಾಖಲೆ ಬರೆದಿದ್ದು, ಈಗ ಮತ್ತೊಂದು ದಾಖಲೆಗೆ ಮುಂದಾಗಿದೆ.
ಹೌದು, 2018ರಲ್ಲಿ ಇಸ್ರೋ ತಿಂಗಳಿಗೆ ಒಂದು ರಾಕೆಟ್ ಉಡಾವಣೆ ಮಾಡುವುದಾಗಿ ತಿಳಿಸಿದ್ದು, ಪ್ರತಿ ತಿಂಗಳು ದೇಶದ ರಾಕೆಟ್ ಒಂದು ನಭಕ್ಕೆ ಹಾರಲಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, “ಮುಂದಿನ ವರ್ಷ ಪ್ರತಿ ತಿಂಗಳು ಒಂದು ರಾಕೆಟ್ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ರಾಕೆಟ್ ಗಳನ್ನು ಕಕ್ಷೆ ಸೇರಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತಷ್ಟು ಏಳಿಗೆ ಸಾಧಿಸುವುದು ಗುರಿಯಾಗಿದೆ” ಎಂದು ತಿಳಿಸಿದ್ದಾರೆ.
2018-19, 2019-20ರ ವಿತ್ತೀಯ ವರ್ಷ ಇಸ್ರೋಗೆ ಮಹತ್ತರವಾಗಿ ಪರಿಣಮಿಸಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಬಜೆಟ್ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಿರಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಸ್ರೋಗೆ 9 ಸಾವಿರ ಕೋಟಿ ರೂಪಾಯಿ ನೀಡಿದೆ. 2018ರ ಜನವರಿಯಲ್ಲಿ ಕಾರ್ಟೋಸ್ಯಾಟ್ -2 ಎಂಬ ರಾಕೆಟ್ ಸುಮಾರು 28 ನ್ಯಾನೋ ಉಪಗ್ರಹ ಹೊತ್ತು ನಭಕ್ಕೆ ಹಾರಲಿದೆ.
ಎಲ್ಲ ರಾಕೆಟ್ ಗಳು ಆಂಧ್ರಪ್ರದೇಶದ ಶ್ರೀ ಹರಿಕೋಟಾ ಉಡಾವಣೆ ಕೇಂದ್ರದಿಂದ ಹಾರಲಿವೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು ಇಡಲು ಮುಂದಾಗಿದ್ದು, ಉಡಾಯಿಸುವ ಪ್ರತಿ ರಾಕೆಟ್ ಯಶಸ್ವಿಯಾಗಲಿ, ಬಾಹ್ಯಾಕಾಶದಲ್ಲಿ ಭಾರತ ಮತ್ತಷ್ಟು ಏಳಿಗೆ ಸಾಧಿಸಲಿ ಎಂಬುದೇ ನಮ್ಮ ಆಶಯ.
ಆಲ್ ದಿ ಬೆಸ್ಟ್ ಇಸ್ರೋ…
Leave A Reply