ಪ್ರೀತಿಯನ್ನೇನೋ ಕೊಂದಿದ್ದ ಆ ಮುಸ್ಲಿಂ ಬಾಯ್ ಫ್ರೆಂಡ್ ಆಕೆಯನ್ನೂ ಕೊಲ್ಲಲೆತ್ನಿಸಿದ?
ಮುಂಬೈ: ದೇಶದಲ್ಲಿ ಮುಸ್ಲಿಂ ಯುವಕರನ್ನು ಪ್ರೀತಿಸುವ ಯುವತಿಯರ ಪಾಡು ಹೇಳತೀರದಾಗಿದ್ದು, ಕೇರಳದಲ್ಲಿ ನಡೆದ ಲವ್ ಜಿಹಾದ್ ಗಳ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಮುಂಬೈನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತಾನು ಪ್ರೀತಿಸಿದ್ದ, ಮಾಜಿ ಪ್ರಿಯತಮೆನ್ನೇ ಕೊಲ್ಲಲು ಯತ್ನಿಸಿದ್ದಾನೆ.
ಮುಂಬೈನ ದಾದರ್ ಎಂಬ ಪ್ರದೇಶದ ಹೋಟೆಲ್ ಒಂದರಲ್ಲಿ ತಂಗಿದ್ದ ಹಿಂದೂ ಯುವತಿ ಮೇಲೆ ಅಜ್ಮಲ್ ಶಾಹ್ ದಾಳಿ ಮಾಡಿದ್ದು, ಆಕೆಯ ಕುತ್ತಿಗೆ ಕೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕಾಲೇಜು ವಿದ್ಯಾರ್ಥಿನಿಯಾಗಿರುವ ಆರತಿ ಶರ್ಮಾ, ಅಜ್ಮಲ್ ಶಾಹ್ ಕೆಲ ತಿಂಗಳುಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಬೇರೆ ಬೇರೆಯಾಗಿದ್ದರು.
ಪ್ರೀತಿಗೆ ತಿಲಾಂಜಲಿ ಇಟ್ಟಿದ್ದ ಅಜ್ಮಲ್ ಸುಮ್ಮನಿರದೇ ಆರತಿ ಮೇಲೆ ದಾಳಿ ಮಾಡಿದ್ದು, ಪ್ರಸ್ತುತ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಆರತಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ತಡರಾತ್ರಿ ಹೋಟೆಲ್ಲಿನ ರೂಮಿಗೆ ನುಗ್ಗಿ ಆರತಿಯ ಗಂಟಲು ಕೊಯ್ದಿದ್ದು, ಬೆಳಗ್ಗೆ ಹೋಟೆಲ್ ಸಿಬ್ಬಂದಿ ರೂಮ್ ಸ್ವಚ್ಛಗೊಳಿಸಲು ಆಗಮಿಸಿ ಬಾಗಿಲು ತೆರೆದಾಗ, ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭೊಯ್ ವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಹೋಟೆಲ್ ಮ್ಯಾನೇಜರ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ಲವ್ ಜಿಹಾದ್ ಗೋ, ಇನ್ನಾವುದೋ ಸೆಳೆತಕ್ಕೋ ಮುಸ್ಲಿಂ ಯುವಕರನ್ನು ಪ್ರೀತಿಸಿ ಹಿಂಸೆ, ಮತಾಂತರ, ನೆಮ್ಮದಿ ಕಳೆದುಕೊಳ್ಳುತ್ತಿರುವವ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಹಾದಿಯಾ ಹಾಗೂ ಆರತಿ ಪ್ರಕರಣಗಳೇ ನಿದರ್ಶನವಾಗಿ ಕಾಣುತ್ತಿವೆ.
Leave A Reply