ಕಾಶ್ಮೀರ ಪಾಕಿಸ್ತಾನದ್ದು, ಅರುಣಾಚಲ ಭಾರತದ್ದಲ್ಲ ಪಶ್ಚಿಮ ಬಂಗಾಳದ ಮಮತಾ ಎಡವಟ್ಟು
ಕೊಲ್ಕತ್ತ: ಸದಾ ಭಾರತ ವಿರೋಧಿಗಳಿಗೆ ಒಂದಿಲ್ಲ, ಒಂದು ರೀತಿ ಪರೋಕ್ಷವಾಗಿ ಸಹಕಾರ ನೀಡುವುದಲ್ಲದೇ, ರಾಷ್ಟ್ರೀಯವಾದಿ ಚಿಂತನೆಗಳಿಗೆ ಪೆಟ್ಟು ನೀಡುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ನಡೆದ ಪರೀಕ್ಷೆಯಲ್ಲಿ ನೀಡಿರುವ ಪ್ರಶ್ನೆ ಪತ್ರಿಕೆಯಲ್ಲಿ ನೀಡಿರುವ ಭಾರತದ ನಕ್ಷೆಯಲ್ಲಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದರೆ, ಅರುಣಾಚಲ ಪ್ರದೇಶ, ಅಕ್ಸಾಯಿ ಚೀನಾ ಪ್ರದೇಶ ಭಾರತದ ನಕ್ಷೆಯಿಂದಲೇ ಮಾಯವಾಗಿದೆ.
ಈ ಪ್ರಶ್ನೆ ಪತ್ರಿಕೆಯನ್ನು ತೃಣಮೂಲ ಕಾಂಗ್ರೆಸ್ ಶಿಕ್ಷಕರ ಘಟಕ ಸಿದ್ಧಪಡಿಸಿದೆ. ಅದಕ್ಕಾಗಿ ಈ ರೀತಿ ದೇಶವನ್ನು ಒಡೆಯುವ, ಏಕತೆಗೆ ಭಂಗ ಉಂಟು ಮಾಡುವ ಕಾರ್ಯ ಸರ್ಕಾರವೇ ಮಾಡುತ್ತಿದೆ. ಅಲ್ಲದೇ ನಕ್ಷೆ ಮೇಲೆ ವೆಸ್ಟ್ ಬಂಗಾಲ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ನ ವಾಟರ್ ಮಾರ್ಕ್ ಹಾಕಲಾಗಿದೆ. ಇದು ಸಂಪೂರ್ಣ ಸರ್ಕಾರಿ ಪ್ರೇರಿತ. ದುರುದ್ದೇಶ ಪೂರ್ವಕ ಕಾರ್ಯ ಎಂದು ಬಿಜೆಪಿ ರಾಜ್ಯ ಕಾರ್ಯ ದರ್ಶಿ ಆರೋಪಿಸಿದ್ದಾರೆ.
ಕಾಶ್ಮೀರ, ಅರುಣಾಚಲ ಪ್ರದೇಶ ಭಾರತದ ಆಡಳಿತಕ್ಕೆ ಒಳಪಡುವುದಿಲ್ಲವೇ ಎಂದು ಪ್ರಶ್ನಿಸಿರುವ ಬಿಜೆಪಿ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಸತ್ತಿದ್ದು, ಕೇವಲ ತೃಣಮೂಲ ಕಾಂಗ್ರೆಸ್ ನ ನೀತಿಯಂತೆ ಸರ್ಕಾರ ನಡೆಸಲಾಗುತ್ತಿದೆ. ಇದು ಇಡೀ ತೃಣಮೂಲ ಕಾಂಗ್ರೆಸ್ ಪಕ್ಷ ಭಯೋತ್ಪಾದಕರಿಗೆ, ದೇಶವಿರೋಧಿಗಳಿಗೆ ಬೆಂಬಲಿಸುತ್ತಿರುವುದಕ್ಕೆ ಸಾಕ್ಷಿ ಎಂದು ಬಿಜೆಪಿ ಆರೋಪಿಸಿದೆ.
ತೃಣಮೂಲ ಕಾಂಗ್ರೆಸ್ಸಿಗರಿಗೆ ದೇಶದ ಏಕತೆ ಮೇಲೆ ನಂಬಿಕೆ ಇಲ್ಲ. ಅವರು ಪಾಕಿಸ್ತಾನ ಪರವಾದ ಹೋರಾಟಕ್ಕೆ ಬೆಂಬಲಿಸಿದ್ದವರು. ಬಾಂಗ್ಲಾದ ಅಕ್ರಮ ವಾಸಿಗಳಿಗೆ ನೆಲೆ ಕಲ್ಪಿಸಿ, ದೇಶದ ವಿರುದ್ಧವೇ ಹೋರಾಡಲು ಪೂರಕ ವಾತಾವರಣ ನಿರ್ಮಿಸಿದ್ದು ಪಶ್ಚಿಮ ಬಂಗಾಳ ಸರ್ಕಾರ ಎಂದು ಬಿಜೆಪಿ ಆರೋಪಿಸಿದೆ.
Leave A Reply