ನಮಾಜ್ ಧ್ವನಿ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ
Posted On November 30, 2017

ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಘಟನೆ ನಡೆದಿದೆ. ಭಾಷಣ ಮಾಡುವ ಸಂದರ್ಭದಲ್ಲೇ ನಮಾಜ್ ಧ್ವನಿ ಕೇಳಿಸಿತು. ಆಜಾನ್ ಪೂರ್ಣವಾಗುವವರೆಗೂ ಭಾಷಣವನ್ನು ನಡುವೆ ನಿಲ್ಲಿಸಿ ಮೌನವಾಗಿ ನಿಂತುಕೊಂಡರು. ಆಜಾನ್ ಪೂರ್ಣಗೊಂಡ ಬಳಿಕ ಮತ್ತೆ ತಮ್ಮ ಭಾಷಣ ಮುಂದುವರೆಸಿದರು.
ಮೋದಿ ಅವರು ತಮ್ಮ ಭಾಷಣವನ್ನು ನಿಲ್ಲಿಸುತ್ತಿದ್ದಂತೆ ಸಭಿಕರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಆದರೆ ಮೋದಿ ಅವರು ಆಜಾನ್ ಮುಗಿದ ಬಳಿಕ ಭಾಷಣ ಆರಂಭಿಸುತ್ತಿದಂತೆ ಎಲ್ಲ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಮೋದಿಯವರ ನಡೆಯನ್ನು ಸ್ವಾಗತಿಸಿದರು.
ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಮತ್ತೊಂದು ಘಟನೆ ನಡೆಯಿತು. ಪ್ರಧಾನಿ ಮೋದಿಯಂತೆ ಬಟ್ಟೆತೊಟ್ಟಿದ್ದ ಪುಟ್ಟ ಬಾಲಕನೊಬ್ಬ ವೇದಿಕೆ ಮೇಲೆ ಬಂದು ಪ್ರಧಾನಿಗೆ ಶುಭಾಶಯ ತಿಳಿಸಿದ. ಬಾಲಕನನ್ನು ಮಾತನಾಡಿಸಿದ ಪ್ರಧಾನಿ ಮೋದಿ ಬಾಲಕನ ಬಳಿ ಬಂದು ಶುಭ ಕೋರಿದರು.
- Advertisement -
Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
July 1, 2022
Leave A Reply