ಪಾಕ್ ಇಬ್ಬಂದಿತನ ಪ್ರದರ್ಶನ, ಉಗ್ರ ಸಯೀದ್ ಗೆ ಮುಂದುವರಿದ ಗೃಹ ಬಂಧನ
ದೆಹಲಿ: ಗೃಹ ಬಂಧನದಿಂದ ಬಿಡುಗಡೆಯಾದ ನಂತರದ ದಿನದಿಂದಲೇ ಭಾರತದ ವಿರುದ್ಧ ನಮ್ಮ ಜಿಹಾದ್ ಮುಂದುವರಿಯಲಿದೆ ಎಂದು ಘೋಳಿಟ್ಟಿದ್ದ ಉಗ್ರ ಹಫೀಜ್ ಸಯೀದ್ ಗೆ ಪಾಕಿಸ್ತಾನ ಗೃಹ ಬಂಧನ ಮುಂದುವರಿಸಲು ನಿರ್ಧರಿಸಿದೆ.
ಮುಂಬೈ ದಾಳಿಯ ಪ್ರಮುಖ ಆರೋಪಿಯಾಗಿರುವ ಸಯೀದ್ ನನ್ನು ಪಾಕಿಸ್ತಾನ ತನ್ನ ಕುತಂತ್ರದ ಮೂಲಕ ಸೂಕ್ತ ಸಾಕ್ಷ್ಯಾದಾರ ಒದಗಿಸದೇ ಗೃಹ ಬಂಧನಕ್ಕೆ ಮುಕ್ತಿ ನೀಡಿತ್ತು. ಆದರೆ ತನ್ನ ಕುತಂತ್ರ ತನಗೆ ತಿರುಗಿದ್ದರಿಂದ ಇಂಗು ತಿಂದ ಮಂಗನಂತಾಗಿರುವ ಪಾಕಿಸ್ತಾನ ಇದೀಗ ತನ್ನ ಮಾತಿಗೆ ತಾನೇ ಬದ್ಧವಾಗಿರದೇ ಮತ್ತೆ ಗೃಹ ಬಂಧನ ಮುಂದುವರಿಸಿದೆ.
ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಿಂದ ಮುಕ್ತಿ ನೀಡಿದಕ್ಕೆ ಅಮೆರಿಕ, ಭಾರತ ಸೇರಿ ವಿಶ್ವಸಮುದಾಯ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕ ಗೃಹ ಬಂಧನ ಮಾಡಿ, ಸಯೀದ್ ನನ್ನು ವಿಶ್ವ ಉಗ್ರರ ಪಟ್ಟಿಯಲ್ಲಿ ಸೇರಿಸಿ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ ಮತ್ತೆ ಗೃಹ ಬಂಧನವನ್ನು ಮುಂದುವರಿಸಿದೆ.
ಇನ್ನು ಪಾಕಿಸ್ತಾನದ ಈ ನಿರ್ಧಾರಕ್ಕೆ ಹಾಸ್ಯಭರಿತ ಮತ್ತು ಪಾಕಿಸ್ತಾನಕ್ಕೆ ಮುಖಭಂಗವಾಗುವಂತ ಪ್ರತಿಕ್ರಿಯೆಗಳು ಬಂದಿವೆ. ‘ಒಬ್ಬ ಉಗ್ರನನ್ನು ಸಾಕ್ಷಿ ಇಲ್ಲ ಎಂದು ಬಿಡುಗಡೆ ಮಾಡುವುದು, ಕೋರ್ಟ್ ನೀಡಿದ ಆದೇಶವನ್ನು ಮೀರಿ ಗೃಹ ಬಂಧನ ಮಾಡುವುದು ಅದೇ ಸರ್ಕಾರ. ಇದು ಪಾಕಿಸ್ತಾನದ ಇಬ್ಬಂದಿತನ ಪ್ರದರ್ಶಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
Leave A Reply