ಅಮೆರಿಕಾದಲ್ಲಿ ಭಾರತೀಯರ ಸಂಖ್ಯೆ ಕೇಳಿದರೇ ಅಚ್ಚರಿಯಾಗದೇ ಇರದು
ಮುಂಬೈ: ಅಮೆರಿಕದಲ್ಲಿ ಎರಡನೇ ಸ್ಥಾನದಲ್ಲಿರುವ ಸಮುದಾಯದ ಜನಸಂಖ್ಯೆ ಶೇ.6 ರಷ್ಟು. ಎರಡನೇ ಸ್ಥಾನದಲ್ಲಿರುವ ಅಮೆರಿಕಾದ ಸಮುದಾಯ ಭಾರತೀಯರು ಎಂಬುದು ಅಚ್ಚರಿ. ಅಮೆರಿಕದ ನಾಗರಿಕತ್ವವನ್ನು 2016ರಲ್ಲಿ ಪಡೆದ ಭಾರತೀಯರ ಸಂಖ್ಯೆ 40,100 ಎಂದು ಅಮೆರಿಕ ಸರ್ಕಾರವೇ ಮಾಹಿತಿ ನೀಡಿದೆ.
ಅಮೆರಿಕ ಸರ್ಕಾರದ ಮಾಹಿತಿ ಪ್ರಕಾರ ದೇಶದ ಶೇ.6 ರಷ್ಟು ಭಾರತೀಯ ಮೂಲದವರು ಅಮೆರಿಕದಲ್ಲಿ ನಾಗರೀಕತ್ವ ಪಡೆದಿದ್ದಾರೆ. ಮ್ಯಾಕ್ಸಿಕನ್ ಸಿಟಿಯಲ್ಲಿ ಹೆಚ್ಚು ಭಾರತೀಯ ಮೂಲದವರು ಇದ್ದಾರೆ ಎಂದು ಗೃಹ ಇಲಾಖೆ ದಾಖಲೆ ಬಿಡುಗಡೆ ಮಾಡಿದೆ.
ಅಮೆರಿಕದ ನಾಗರಿಕತ್ವ ಭಯಸಿ 2016ರಲ್ಲಿ ನಾನಾ ದೇಶದ 9.72 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಶೇ.77 ರಷ್ಟು ಅರ್ಜಿಗಳು ಪರಿಶೀಲನೆಯಲ್ಲಿವೆ. ಅದರಲ್ಲಿ ಭಾರತೀಯ ಮೂಲದ ಅತಿ ಹೆಚ್ಚು ಜನರು ನಾಗರೀಕತ್ವ ಪಡೆದಿದ್ದಾರೆ. ನಾಗರೀಕತ್ವ ಪಡೆದವರು ದೇಶದ ಮೌಲ್ಯವನ್ನು ಕಾಪಾಡಬೇಕು. ಅವರಿಗೆ ಹಲವು ಹಕ್ಕು ಮತ್ತು ರಕ್ಷಣೆ ದೊರೆಯಲಿವೆ. ಅಲ್ಲದೇ ಮೂಲಭೂತ ಹಕ್ಕಾದ ಮತದಾನ ಮಾಡುವ ಹಕ್ಕು ಅವರು ಪಡೆಯಲಿದ್ದಾರೆ. ಇತರೆ ಉದ್ಯೋಗಗಳನ್ನು ಮಾಡಲು ಸ್ವಾಂತಂತ್ರ್ಯ ಹೊಂದಲಿದ್ದಾರೆ. ವಲಸಿಗರು ರಕ್ಷಣೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಏಷ್ಯನ್ ಅಮೆರಿಕಾ ನ್ಯಾಯಾಧೀಶ್ ಜಾನ್ ಸಿ ಯಾಂಗ್ ಹೇಳಿದ್ದಾರೆ.
Leave A Reply