ಬರೀ ಜಿಡಿಪಿ ಅಷ್ಟೇ ಅಲ್ಲ, ಸೆನ್ಸೆಕ್ಸ್ ಕೂಡ ಸುಧಾರಣೆಯತ್ತ
Posted On December 1, 2017
ಮುಂಬೈ: ಜಿಡಿಪಿ ಬೆಳವಣಿಗೆಯಿಂದ ಭಾರತದಲ್ಲಿ ಹೊಸ ನಿರೀಕ್ಷೆಗಳು ಹುಟ್ಟಿವೆ. ಇದರ ಮಧ್ಯೆ ಜಿಡಿಪಿ ಏರಿಕೆಯಿಂದ ಉದ್ಯಮ ವಲಯದಲ್ಲು ಚೇತರಿಕೆ ಕಂಡು ಬಂದಿದ್ದು. ಶುಕ್ರವಾರ ಸೆನ್ಸೆಕ್ಸ್ 140 ಪಾಯಿಂಟ್ ಸುಧಾರಣೆ ಕಂಡಿದೆ. ಇದಕ್ಕೆ ಮೂಲ ಕಾರಣ ಜಿಡಿಪಿ ಏರಿಕೆ.
ಡಿಸೆಂಬರ್ ನಲ್ಲಿ ತೀವ್ರ ಹಿನ್ನಡೆ ಕಂಡಿದ್ದ ಸೆನ್ಸೆಕ್ಸ್ ನಿಂದ ಹೂಡಿಕೆದಾರರು ಸಮಸ್ಯೆ ಎದುರಿಸಿದ್ದರು. ಇದೀಗ ಜಿಡಿಪಿ ಏರಿಕೆಯಾಗಿದ್ದರಿಂದ, ಹೂಡಿಕೆಗೆ ಉದ್ಯಮಿದಾರರು ಮುಂದಾಗಿದ್ದಾರೆ. ಅದಕ್ಕೆ ಪೂಕರವಾಗಿ ಸೆನ್ಸೆಕ್ಸ್ 140 ಪಾಯಿಂಟ್ ಹೆಚ್ಚಳ ಕಂಡಿದೆ. ಕಳೆದ ಮೂರು ಸಭೆಯಲ್ಲಿ 575.09 ಪಾಯಿಂಟ್ ಇಳಿಕೆಯಾಗಿತ್ತು. ಆದರೆ ಇದೀಗ 140.49 ಪಾಯಿಂಟ್ಸ್ ಹೆಚ್ಚಳ ಕಂಡಿದೆ. ತಂತ್ರಜ್ಞಾನ ಮತ್ತು ಆರೋಗ್ಯ ವಿಭಾಗಗಳಲ್ಲಿ ಶೇ.1.29 ಲಾಭ ಹೆಚ್ಚಳವಾಗಿದೆ.
ನಿಫ್ಟಿ ಕೂಡಾ ಮೊದಲನೆ ಸ್ಥಿತಿಗೆ ತಲುಪುತ್ತಿದ್ದು, 43.85 ಪಾಯಿಂಟ್ಸ್ ತಲುಪಿದೆ. ನೂತನ ಜಿಎಸ್ ಟಿ ನಿಯಮದಿಂದ ತುಸು ಏರು ಪೇರು ಕಂಡಿದ ನಿಫ್ಟಿ ವಲಯ ಇದೀಗ ಹಳಿಗೆ ಬಂದಿದೆ ಎಂಬುದು ದಲಾಳಿಗಳ ಮಾತು.
- Advertisement -
Leave A Reply