ಸುಖಾನಂದ ಶೆಟ್ಟಿಯವರೊಂದಿಗೆ ಆವತ್ತು ಪ್ರೇಮ್ ಹಾಗೂ ದಿನೇಶ್ ಕೂಡ ಹುತಾತ್ಮರಾಗಿ 11 ವರ್ಷ!
ಇವತ್ತು ಡಿಸೆಂಬರ್ 1. ಸುಖಾನಂದ ಶೆಟ್ಟಿಯವರನ್ನು ಮುರಾಮೋಸದಿಂದ ಸುಪಾರಿ ಹಂತಕರು ಕೊಂದು 11 ವರ್ಷ. ಅದು ನವೆಂಬರ್ ತಿಂಗಳು. ದೀಪಾವಳಿಯ ಹಬ್ಬದ ಸಮಯ. ಸುಖಾನಂದ ಶೆಟ್ಟಿ ಮೂಲ್ಕಿ ಬಸ್ ನಿಲ್ದಾಣದ ಹೊರಗೆ ಪಟಾಕಿ ಸ್ಟಾಲ್ ಹಾಕಿದ್ದರು. ಅದು ಅವರ ವರ್ಷದ ಜವಾಬ್ದಾರಿ. ಪಟಾಕಿ ಮಾರಾಟದಿಂದ ಬಂದ ಲಾಭದ ಹಣದಿಂದ ಸಂಕಷ್ಟದಲ್ಲಿ ಇರುವ ಹಿಂದೂ ಸಂಘಟನೆಯ ಯುವಕರಿಗೆ ನೆರವಾಗುವ ಉದ್ದೇಶ. ಧರ್ಮವನ್ನು ರಕ್ಷಿಸುವ ಹೋರಾಟದಲ್ಲಿ ಅನೇಕ ಕೇಸುಗಳನ್ನು ಮೈಮೇಲೆ ಎಳೆದುಕೊಂಡ ಹಿಂದೂ ಹುಡುಗರ ಪ್ರಕರಣಗಳ ಕಾನೂನು ಹೋರಾಟಕ್ಕೆ ಹಣದ ಅವಶ್ಯಕತೆ ಬೀಳುತ್ತದೆಯಲ್ಲ, ಅದನ್ನು ಒಟ್ಟು ಮಾಡುವ ಸಲುವಾಗಿ ಸುಖಾನಂದ ಶೆಟ್ಟಿ ಪಟಾಕಿ ಸ್ಟಾಲ್ ಹಾಕಿದ್ದರು. ಆವತ್ತು ನಾನು ಸುಖಾನಂದ ಶೆಟ್ಟಿಯವರನ್ನು ಮೊದಲಿಗೆ ಮತ್ತು ಕೊನೆಯದಾಗಿ ನೋಡಿದ್ದು.
ಬಜ್ಪೆಯ ಶಾರದೋತ್ಸವದ ಗಲಾಟೆಯ ಬಳಿಕ “ಎಫ್ ಐ ಆರ್” ಸಂಚಿಕೆಯನ್ನು ಮಾಡುವ ಸಲುವಾಗಿ ಅವರ ಹೇಳಿಕೆಯನ್ನು ಪಡೆಯುವ ಸಲುವಾಗಿ ಅವರನ್ನು ಭೇಟಿ ಮಾಡಿದ್ದೆ. ಸುಖಾನಂದ ಶೆಟ್ಟಿಯವರು ಪಟಾಕಿ ಸ್ಟಾಲ್ ಹೊರಗೆ ಕುಳಿತಿದ್ದರು. ನನ್ನ ಯಾವುದೇ ಬೈಟ್ ಬೇಡಾ, ಯಾಕೆಂದರೆ ನಾನು ಪ್ರಚಾರದಲ್ಲಿರಲು ಇಷ್ಟೆಲ್ಲಾ ಮಾಡುತ್ತಿಲ್ಲ. ಈಗ ನಾನು ಕುಳಿತುಕೊಂಡ ಜಾಗಕ್ಕೆ ಯಾವಾಗ ಎಲ್ಲಿಂದ ಯಾವ ಜಿಹಾದಿ ಬಂದು ಹಿಂದಿನಿಂದ ಹೊಡೆಯುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಟಿವಿಯಲ್ಲಿ ಬಂದಷ್ಟು ನನ್ನ ಗುರುತು ಹೆಚ್ಚು ಹಿಡಿಯಲು ಅವರಿಗೆ ಸುಲಭವಾಗುತ್ತದೆ, ಹೆದರಿಕೆ ಎಂದಲ್ಲ. ಆದರೆ ಸಂಘಟನೆಗೆ ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ” ಎಂದಿದ್ದರು ಸುಖಾನಂದ ಶೆಟ್ಟಿ.
ಆವತ್ತು ಅವರ ಒಳಗಿದ್ದ ಆ ಕೆಚ್ಚು, ಏನಾದರೂ ಮಾಡಲೇಬೇಕು ಎನ್ನುವ ಹುಮ್ಮಸ್ಸು, ಪ್ರಚಾರದಲ್ಲಿ ಬರುವುದಕ್ಕಿಂತ ಹಿಂದೂ ಧರ್ಮಕ್ಕಾಗಿ ದುಡಿಯಬೇಕು ಎನ್ನುವ ಹಂಬಲ ನೋಡಿ ಆಶ್ಚರ್ಯವಾಗಿತ್ತು. ಸುಖಾನಂದ ಶೆಟ್ಟಿ ಒಂದಲ್ಲ ಒಂದು ದಿನ ಮೂಲ್ಕಿ-ಮೂಡಬಿದ್ರೆಯ ಶಾಸಕರಾಗಿ ಆಯ್ಕೆಯಾಗಬಹುದು ಎಂದು ಅನಿಸಲು ಶುರುವಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಕುಳಾಯಿಯ ಮಾರ್ಬಲ್ ಅಂಗಡಿಯ ಓಣಿಯಲ್ಲಿದ್ದ ಸುಖಾನಂದ ಶೆಟ್ಟಿಯವರಿಗೆ ಓಡಲು ಕೂಡ ಅವಕಾಶ ಇಲ್ಲದ ಹಾಗೆ ವಾಹನ ಅಡ್ಡ ನಿಲ್ಲಿಸಿ ಕೊಚ್ಚಿ ಕೊಂದ ವಿಷಯ ಕೇಳಿದಾಗ ಮೊದಲು ನೆನಪಿಗೆ ಬಂದ ವಾಕ್ಯ ಅವರೇ ಹೇಳಿದ ” ಯಾವಾಗ, ಯಾರು ಹಿಂದಿನಿಂದ ಬಂದು ಹೊಡೆಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ”
ಸುಖಾನಂದ ಶೆಟ್ಟಿಯವರನ್ನು ಆವತ್ತು ಉಳಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಎಜೆ ಆಸ್ಪತ್ರೆಯ ಆವರಣದಲ್ಲಿ ಜನಸಾಗರ. ಶವವನ್ನು ಮೆರವಣಿಗೆಯಲ್ಲಿಯೇ ತೆಗೆದುಕೊಂಡು ಹೋಗುವುದಾಗಿ ಹಿಂದೂ ಕಾರ್ಯಕತ್ರರ ಒತ್ತಾಯ. ಮೂಲ್ಕಿಯಲ್ಲಿ ಕಲ್ಲು ತೂರಾಟ, ಇಬ್ಬರು ಹಿಂದೂ ಕಾರ್ಯಕತ್ರರು ಶೂಟೌಟ್ ಎಲ್ಲದಕ್ಕೂ ಇವತ್ತು 11 ವರ್ಷ. ಸುಖಾನಂದ ಶೆಟ್ಟಿಯವರೊಂದಿಗೆ ಇಬ್ಬರು ಯುವಕರು ಕೂಡ ಆವತ್ತು ಪ್ರಾಣ ತೆತ್ತಿದ್ದಾರೆ. ಅವರೇ ದಿನೇಶ್ ಹಾಗೂ ಪ್ರೇಮ್. ಅವರನ್ನು ಕೂಡ ಇವತ್ತು ನೆನೆಯುವ ಅಗತ್ಯ ಇದೆ. ಒಟ್ಟಿನಲ್ಲಿ ಮೂರು ಜೀವಗಳು ಆವತ್ತು ಹುತಾತ್ಮರಾದ ದಿನ. ಅದರ ನಂತರ ಗುರುಪುರ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಆದರೆ ಇವತ್ತಿಗೂ ಜನ ಸುಖಾನಂದ ಶೆಟ್ಟಿಯವರನ್ನು ನೆನೆಯುತ್ತಾರೆ ಎಂದರೆ ಅದು ಸುಖಾನಂದ ಶೆಟ್ಟಿಯವರ ತಾಕತ್ತು.
Leave A Reply