ಮುಸ್ಲಿಮರೇ, ತ್ರಿವಳಿ ತಲಾಖ್ ನೀಡುವ ಮುನ್ನ, ತಿಳಿದುಕೊಳ್ಳಿ ಕಾನೂನಿನ ಈ ಗುನ್ನ!
ದೆಹಲಿ: ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೇ, ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸಲು ಹೊರಟಿದ್ದು, ತ್ರಿವಳಿ ತಲಾಖ್ ಕರಡು ಮಸೂದೆ ತಯಾರಿಸಿದೆ.
ಯಾವುದೇ ಮುಸ್ಲಿಂ ವ್ಯಕ್ತಿ ಪತ್ರ, ಇ-ಮೇಲ್, ವಾಟ್ಸ್ಯಾಪ್ ಸೇರಿ ಯಾವುದೇ ವಿದ್ಯುನ್ಮಾನ ಮಾಧ್ಯಮದ ಮೂಲಕ ತ್ರಿವಳಿ ತಲಾಖ್ ನೀಡುವುದು ನಿಷಿದ್ಧವಾಗಿದೆ. ಒಂದು ವೇಳೆ ಮುಸ್ಲಿಂ ವ್ಯಕ್ತಿ ತಲಾಖ್ ನೀಡಿದರೆ ಮೂರು ವರ್ಷ ಜೈಲು, ಜಾಮೀನು ರಹಿತ ವಾರೆಂಟ್ ಹಾಗೂ ಪತ್ನಿಗೆ ಪರಿಹಾರ ನೀಡುವ ಸೌಲಭ್ಯವನ್ನು ಸರ್ಕಾರ ಕರಡು ಪ್ರತಿಯಲ್ಲಿ ಉಲ್ಲೇಖಿಸಿದೆ.
ಅಲ್ಲದೆ, ತ್ರಿವಳಿ ತಲಾಖ್ ಕುರಿತ ಕಾನೂನು ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಿಗೆ ಕಳುಹಿಸಿದ್ದು, ಅಭಿಪ್ರಾಯ, ಸಲಹೆ-ಸೂಚನೆ ನೀಡುವಂತೆ ಕೋರಿದೆ.
ಹಾಗೆ ನೋಡಿದರೆ, ಸಂಸತ್ತಿನ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕರೆ ರಾಜ್ಯಗಳ ಅಭಿಪ್ರಾಯ ಕೇಳುವ ಅವಶ್ಯಕತೆ ಇಲ್ಲವಾದರೂ, ಸೂಕ್ಷ್ಮ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳ ಸಲಹೆ ಪಡೆಯಲು ಮುಂದಾಗಿದೆ.
ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿ ಕರಡು ರೂಪಿಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ.ಚೌಧರಿ ಸಚಿವರ ಸಮಿತಿಯ ಸದಸ್ಯರಾಗಿದ್ದಾರೆ.
ಮುಂಬರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಕಾನೂನು ರಚಿಸುವ ಸಾಧ್ಯತೆಯಿದೆ. ಕಳೆದ ಆಗಸ್ಟ್ ನಲ್ಲೇ ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ, ಸುಮಾರು 67 ಪ್ರಕರಣ ಸುದ್ದಿಯಾಗಿದ್ದವು
Leave A Reply