ಭಯೋತ್ಪಾದನೆಯನ್ನು ಧರ್ಮದ ಜತೆ ತಳುಕು ಹಾಕಬಾರದು: ಸುಷ್ಮಾ ಸ್ವರಾಜ್
Posted On December 2, 2017
0
ಮಾಸ್ಕೋ: ಭಯೋತ್ಪಾದನೆಯನ್ನು ಯಾವುದೇ ಧರ್ಮದ ಜತೆಗೆ ತಳುಕು ಹಾಕಬಾರದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಶಾಂಘೈ ಸಹಕಾರ ಶೃಂಗಸಭೆ (ಎಸ್ ಸಿಒ)ಯಲ್ಲಿ ಮಾತನಾಡಿದ ಅವರು, ಧರ್ಮವನ್ನು ಭಯೋತ್ಪಾದನೆ ಜತೆ ಸಮೀಕರಿಸುವುದು ಸರಿಯಲ್ಲ. ಹಾಗೆ ಮಾಡಲೂ ಬಾರದು. ಯಾವುದೇ ವ್ಯಕ್ತಿ, ನಾಗರಿಕತೆ ಹಾಗೂ ಜನಾಂಗದೊಂದಿಗೆ ತಳುಕು ಹಾಕುವುದು ಅಪರಾಧಕ್ಕೆ ಸಮಾನ, ಮಾನವೀಯತೆಯ ಹರಣ ಮಾಡಿದಂತೆ ಎಂದಿದ್ದಾರೆ. ಆದರೆ ಭಾರತ ಮಾತ್ರ ಎಲ್ಲ ರೀತಿಯ ಭಯೋತ್ಪಾದನೆ ಖಂಡಿಸುತ್ತದೆ ಎಂದೂ ತಿಳಿಸಿದ್ದಾರೆ
ಭಾರತ ಶಾಂಘೈ ಸಹಕಾರ ಸಂಘಟನೆಯ ಖಾಯಂ ರಾಷ್ಟ್ರವಾದ ಬಳಿಕ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದ್ದು. ಪೂರ್ಣಾವಧಿ ಸದಸ್ಯವಾಗಿರುವ ಪಾಕಿಸ್ತಾನವನ್ನು ಸುಷ್ಮಾ ಸ್ವರಾಜ್ ಅಭಿನಂದಿಸಿದರು.
Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
November 11, 2025









